ನೋಟಿನ ಮಳೆಗರೆದ ಪಂಜಾಬ್ ಮದುವೆ: ವಧುವಿನ ಮೇಲೆ ಬರೋಬ್ಬರಿ 8.5 ಕೋಟಿ ರೂ. ನಗದು ಸುರಿಸಿದ ವರನ ಕುಟುಂಬ!
ಚಂಡೀಗಢ: ಭಾರತೀಯ ಮದುವೆ ಎಂದರೆ ಅಲ್ಲಿ ಸಂಭ್ರಮಕ್ಕೆ ಕೊನೆಯಿರುವುದಿಲ್ಲ. ತಮ್ಮ ಶಕ್ತಿಗನುಗುಣವಾಗಿ ಪ್ರತಿಯೊಬ್ಬರೂ ಮದುವೆಯನ್ನು ಅದ್ದೂರಿಯಾಗಿ, ಅಚ್ಚುಕಟ್ಟಾಗಿ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಪಂಜಾಬ್‌ನಲ್ಲಿ ನಡೆದ ಈ ವಿವಾಹ ಮಹೋತ್ಸವವು ಇಡೀ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಮದುವೆ ಮಂಟಪದಲ್ಲಿ ವಧುವಿನ ಮೇಲೆ ಹೂವಿನಂತೆ ನೋಟುಗಳನ್ನು ಚೆಲ್ಲುವ ಮೂಲಕ ವರನ ಕುಟುಂಬಸ್ಥರು ಬರೋಬ್ಬರಿ 8.5 ಕೋಟಿ ರೂಪಾಯಿ ನಗದು ಹಣವನ್ನು ಮಳೆಗರೆದಿದ್ದಾರೆ! ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಿರುವ ಈ ವಿಡಿಯೋದಲ್ಲಿ, ಮದುವೆಯ ಮಂಟಪದಲ್ಲಿ…

