ಡಾಕ್ಟರ್ರೇ ಡಾಕ್ಟರ್ರನ್ನು ಕೊಂದ ಕರಾಳ ಕಥೆ!: ಮದುವೆಯಾದ ಒಂದು ವರ್ಷಕ್ಕೆ ವೈದ್ಯ ಪತ್ನಿಯ ಹತ್ಯೆ; ‘ಪ್ರೊಪೊಫಾಲ್’ ಅರಿವಳಿಕೆ ಇಂಜೆಕ್ಷನ್ ಬಳಸಿ ಕೊಂದ ಸರ್ಜನ್ ಪತಿ ಅರೆಸ್ಟ್!
ಬೆಂಗಳೂರು:ಜೀವ ಉಳಿಸುವ ಪವಿತ್ರ ವೃತ್ತಿಯಲ್ಲಿದ್ದ ವೈದ್ಯ ದಂಪತಿಗಳ ನಡುವಿನ ದಾಂಪತ್ಯ ಕಲಹವು ಪತ್ನಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿವಾಹವಾದ ಕೇವಲ ಒಂದು ವರ್ಷದಲ್ಲಿಯೇ ಜನರಲ್ ಸರ್ಜನ್ ಆಗಿದ್ದ ಪತಿಯು, ಚರ್ಮರೋಗ ತಜ್ಞೆಯಾಗಿದ್ದ (Dermatologist) ತನ್ನ ಪತ್ನಿಯನ್ನು ಅರಿವಳಿಕೆ (Anaesthetic) ಔಷಧಿ ನೀಡಿ ಹತ್ಯೆ ಮಾಡಿದ್ದಾನೆ ಎಂಬ ಗಂಭೀರ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಘಟನೆ ಹಿನ್ನೆಲೆ:ಮೃತರನ್ನು ಡಾ. ಕೃತಿಕಾ ಎಂ. ರೆಡ್ಡಿ (28) ಮತ್ತು ಆರೋಪಿಯನ್ನು ಡಾ. ಮಹೇಂದ್ರ ರೆಡ್ಡಿ (31)…

