​ಅಂಚಟಗೇರಿ ಬಳಿ ಬಸ್-ಬೈಕ್ ಭೀಕರ ಅಪಘಾತ: ತಂದೆ ಮತ್ತು ಮಗು ಸ್ಥಳದಲ್ಲೇ ಸಾವು; ಮತ್ತೊಂದು ಮಗುವಿನ ಸ್ಥಿತಿ ಗಂಭೀರ

ಹುಬ್ಬಳ್ಳಿ: ತಾಲೂಕಿನ ಅಂಚಟಗೇರಿ ಗ್ರಾಮದ ಬಳಿ ಸಾರಿಗೆ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಂದೆ ಹಾಗೂ ಎರಡು ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಕಾರವಾರದಿಂದ ಹುಬ್ಬಳ್ಳಿಯತ್ತ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದ್ದು, ಮತ್ತೊಂದು ಮಗು ಸಾವು–ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ತಡಸ ಗ್ರಾಮದ ನಿವಾಸಿ ಮೆಹಬೂಬ ಖಾನ್ ಉಸ್ತಾದಿ (36) ಹಾಗೂ ಅವರ ಎರಡು ವರ್ಷದ…

Read More

ಸವದತ್ತಿ ಬಳಿ ಭೀಕರ ರಸ್ತೆ ಅಪಘಾತ: ಡಿಸಿಎಂ ಆಪ್ತ ಕಾರ್ಯದರ್ಶಿ ಕಾರು ಪಲ್ಟಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ಹುಬ್ಬಳ್ಳಿ: ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಸಮೀಪ ಗುರುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ (ಪಿಎಸ್) ರಾಜೇಂದ್ರ ಪ್ರಸಾದ್ ಅವರಿಗೆ ತೀವ್ರ ಗಾಯಗಳಾಗಿವೆ. ​ಸವದತ್ತಿ ಪಟ್ಟಣದ ನಿವಾಸಿ ಮಂಜುನಾಥ್ ಬೈರ್ನಟ್ಟಿ (30) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷಾ ಸಕ್ಕರೆ ಕಾರ್ಖಾನೆಗೆ ಕೆಲಸದ ನಿಮಿತ್ತ ಮಂಜುನಾಥ್ ಅವರು ಬೈಕ್‌ನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಮಂಜುನಾಥ್ ಅವರ…

Read More

ಧಾರವಾಡ ಕವಲಗೇರಿ ಮಠದ ಸ್ವಾಮಿ ವಿಡಿಯೋ ವಿವಾದ: 10 ಲಕ್ಷಕ್ಕೆ ಡೀಲ್, 7 ಲಕ್ಷ ಪಾವತಿ – ಬಾಕಿ ಹಣಕ್ಕಾಗಿ ಬ್ಲ್ಯಾಕ್‌ಮೇಲರ್‌ಗಳ ಕೃತ್ಯ?

ಧಾರವಾಡ: ವಿದ್ಯಾಕಾಶಿ ಧಾರವಾಡದ ಪವಿತ್ರ ನೆಲದಲ್ಲಿ ಧಾರ್ಮಿಕ ಕೇಂದ್ರವೊಂದು ಈಗ ಅಪಚಾರದ ಕೇಂದ್ರವಾಗಿ ಸುದ್ದಿಯಾಗುತ್ತಿದೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ಶಿವಾನಂದ ಮಠದ ಸರಸ್ವತಿ ಸ್ವಾಮೀಜಿ ಅವರದ್ದೆನ್ನಲಾದ ಅಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಮಠದ ಘನತೆ ಹಾಗೂ ಭಕ್ತರ ನಂಬಿಕೆಗೆ ತೀವ್ರ ಧಕ್ಕೆ ತಂದಿದೆ. ಆದರೆ, ಈ ವಿಡಿಯೋ ವೈರಲ್ ಆಗಿರುವ ಹಿಂದೆ ಕೇವಲ ನೈತಿಕ ಪತನವಷ್ಟೇ ಅಲ್ಲದೆ, ಲಕ್ಷಾಂತರ ರೂಪಾಯಿಗಳ ಬ್ಲ್ಯಾಕ್‌ಮೇಲ್ ದಂಧೆ ಅಡಗಿರುವುದು ಈಗ ಸ್ಫೋಟಕ ಮಾಹಿತಿಯೊಂದಿಗೆ ಹೊರಬಿದ್ದಿದೆ. ​ಘಟನೆಯ ಕರಾಳ…

Read More

ಸಂಶಿ: ಪಾದಚಾರಿಗೆ ಬೈಕ್ ಡಿಕ್ಕಿ, ಗಂಭೀರ ಗಾಯ – ಸಮಯಕ್ಕೆ ಬಾರದ ಆಂಬ್ಯುಲೆನ್ಸ್‌!

ಕುಂದಗೋಳ: ಹುಬ್ಬಳ್ಳಿ-ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪಾದಚಾರಿಯೊಬ್ಬರಿಗೆ ಬೈಕ್ ಸವಾರನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಮಧ್ಯಾಹ್ನ ಕುಂದಗೋಳ ತಾಲೂಕಿನ ಸಂಶಿ ಗ್ರಾಮದ ಬಳಿ ನಡೆದಿದೆ. ಈ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್‌ ಲಭ್ಯವಾಗದೆ ಸ್ಥಳೀಯ ಆಸ್ಪತ್ರೆಯಲ್ಲಿ ನರಳಾಟ ನಡೆಸಿದ ದಾರುಣ ಪರಿಸ್ಥಿತಿ ಎದುರಾಯಿತು. ​ಅಪಘಾತದ ವಿವರ ​ಸಂಶಿ ಗ್ರಾಮದ ಬಳಿ, ರಸ್ತೆಯ ಮೇಲೆ ಹೊರಟಿದ್ದ ಮಂಜುನಾಥ ದ್ಯಾಮನಗೌಡ ಧರಣಿ ಎಂಬುವವರಿಗೆ ಮಲಿಕರೆಹಾನ್ ನದಾಫ್ ಎಂಬ ಯುವಕ ಚಲಾಯಿಸುತ್ತಿದ್ದ…

Read More

ಬೃಹತ್‌ ಸ್ಪಿರಿಟ್‌ ಹಾಗೂ ಗಾಂಜಾ ಜಾಲ ಭೇದಿಸಿದ ಧಾರವಾಡ ಪೊಲೀಸರು: ಇಬ್ಬರ ಬಂಧನ

ಬೃಹತ್‌ ಸ್ಪಿರಿಟ್‌ ಹಾಗೂ ಗಾಂಜಾ ಜಾಲ ಭೇದಿಸಿದ ಧಾರವಾಡ ಪೊಲೀಸರು: ಇಬ್ಬರ ಬಂಧನ ​ಧಾರವಾಡ, ಡಿಸೆಂಬರ್ 8: ಜಿಲ್ಲಾ ಪೊಲೀಸರು ಅಬಕಾರಿ ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಪ್ರಮುಖ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರ ವಶದಿಂದ ಬೃಹತ್ ಪ್ರಮಾಣದ ಒಣಗಿದ ಮಾದಕ ಗಾಂಜಾವನ್ನು ಜಪ್ತಿ ಮಾಡುವ ಮೂಲಕ ಸ್ಪಿರಿಟ್ ಮತ್ತು ಮಾದಕವಸ್ತುಗಳ ಅಕ್ರಮ ಜಾಲವನ್ನು ಭೇದಿಸಿದ್ದಾರೆ. ​ನವೆಂಬರ್ 24 ರಂದು ಮುಂಜಾನೆ ಗರಗ ಪೊಲೀಸ್ ಠಾಣಾ ವ್ಯಾಪ್ತಿಯ ತೇಗೂರ ಗ್ರಾಮದ ಭಾರತ ಪ್ಯಾಲೇಸ್ ಹೋಟೆಲ್…

Read More

ಮಾದಕ ವಸ್ತು ತಡೆದಿದ್ದಕ್ಕೆ ಜೈಲರ್‌ ಮೇಲೆ ಖೈದಿಗಳಿಂದ ಮಾರಣಾಂತಿಕ ಹಲ್ಲೆ: ಕಾರವಾರ ಜೈಲಿನಲ್ಲಿ ಭೀಕರ ಘಟನೆ

ಮಾದಕ ವಸ್ತು ತಡೆದಿದ್ದಕ್ಕೆ ಜೈಲರ್‌ ಮೇಲೆ ರೌಡಿಗಳ ಮಾರಣಾಂತಿಕ ಹಲ್ಲೆ: ಕಾರವಾರ ಜೈಲಿನಲ್ಲಿ ಭೀಕರ ಘಟನೆ ಕಾರವಾರ (ಉತ್ತರಕನ್ನಡ): ಜಿಲ್ಲಾ ಕಾರಾಗೃಹದಲ್ಲಿ ಮಾದಕ ವಸ್ತುಗಳ ಪೂರೈಕೆ ಮತ್ತು ಬಳಕೆಗೆ ಸಂಪೂರ್ಣವಾಗಿ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ, ರೊಚ್ಚಿಗೆದ್ದ ಮಂಗಳೂರಿನ ಮೂಲದ ಇಬ್ಬರು ಕುಖ್ಯಾತ ರೌಡಿಗಳು ಜೈಲರ್ ಮತ್ತು ಇತರ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಘಟನೆ ಕಾರವಾರದ ಜಿಲ್ಲಾ ಕಾರಾಗೃಹದಲ್ಲಿ ವರದಿಯಾಗಿದೆ. ಜೈಲರ್ ಕಲ್ಲಪ್ಪ ಗಸ್ತಿ ಸೇರಿದಂತೆ ಕರ್ತವ್ಯ ನಿರತ ಇತರೆ ಮೂವರು ಸಿಬ್ಬಂದಿ ಮೇಲೆ…

Read More

ಭೀಕರ ಅಪಘಾತಕ್ಕೆ ಇನ್ಸ್‌ಪೆಕ್ಟರ್ ಬಲಿ: ಅಣ್ಣಿಗೇರಿ ಬಳಿ ನಡೆದ ದುರಂತದಲ್ಲಿ ಪಂಚಾಕ್ಷರಿ ಹಿರೇಮಠ ಸ್ಥಳದಲ್ಲೇ ಸಾವು

ಹುಬ್ಬಳ್ಳಿ: (ಡಿ. 5) ಧಾರವಾಡ ಜಿಲ್ಲೆಯ ಅಣ್ಣಿಗೇರಿ ಸಮೀಪ ಕೆಲ ಘಂಟೆಗಳ ಹಿಂದೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ತೀವ್ರ ಆಘಾತ ಮೂಡಿಸಿದೆ. ಮೃತರನ್ನು ಇನ್ಸ್‌ಪೆಕ್ಟರ್ ಪಂಚಾಕ್ಷರಿ ಹಿರೇಮಠ ಎಂದು ಗುರುತಿಸಲಾಗಿದೆ. ಮದುವೆ ಮುಗಿಸಿಕೊಂಡು ಹಿಂದಿರುಗಿ ಬರುತ್ತಿರುವಾಗ ಈ ಘಟನೆ ಅಣ್ಣಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಅಪಘಾತದ ತೀವ್ರತೆಗೆ ಇನ್ಸ್‌ಪೆಕ್ಟರ್ ಪಂಚಾಕ್ಷರಿ ಹಿರೇಮಠ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿ…

Read More

ನವಲಗುಂದ ಪೊಲೀಸ್ ಠಾಣೆ: ಮನೆ ಕಳ್ಳತನ ಪ್ರಕರಣ ಭೇದಿಸಿ 7 ಗಂಟೆಯೊಳಗೆ 7.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ!

​ಧಾರವಾಡ: ನವಲಗುಂದ ಪಟ್ಟಣದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ನವಲಗುಂದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಭೇದಿಸಿದ್ದಾರೆ. ಕಳ್ಳತನ ನಡೆದ ಕೇವಲ 6 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 7.5 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ​ಘಟನೆ ವಿವರ: ​ಡಿಸೆಂಬರ್ 1, 2025 ರಂದು ಜಗದೀಶ ವೀರುಪಾಕ್ಷಪ್ಪ ಮುಳ್ಳೂರ ಎಂಬುವವರು ನವಲಗುಂದ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನವೆಂಬರ್ 29, 2025 ರ ಬೆಳಿಗ್ಗೆ 10 ಗಂಟೆಯಿಂದ ನವೆಂಬರ್…

Read More

ಬಾಗಲಕೋಟೆ: ಕಬ್ಬಿನ ಟ್ರ್ಯಾಕ್ಟರ್‌ಗೆ ಕಾರು ಡಿಕ್ಕಿ, ನಾಲ್ವರು ಯುವಕರ ದುರ್ಮರಣ!

​ಬಾಗಲಕೋಟೆ-ವಿಜಯಪುರ ಹೆದ್ದಾರಿ (ಜಮಖಂಡಿ): ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಿದ್ದಾಪುರ ಗ್ರಾಮದ ಬಳಿ ಮಂಗಳವಾರ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಯುವಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ​ಘಟನೆ ವಿವರ ​ಈ ದುರ್ಘಟನೆ ಬಾಗಲಕೋಟೆ-ವಿಜಯಪುರ ರಾಜ್ಯ ಹೆದ್ದಾರಿಯ (ಬಿಜಾಪುರ-ಬೆಳಗಾವಿ ಹೆದ್ದಾರಿ) ಸಿದ್ದಾಪುರ ಗ್ರಾಮದ ಸಮೀಪವಿರುವ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹತ್ತಿರ ರಾತ್ರಿ 12.30ರ ಸುಮಾರಿಗೆ ನಡೆದಿದೆ. ಸಿದ್ದಾಪುರ ಗ್ರಾಮದ ನಾಲ್ವರು ಸ್ನೇಹಿತರು ತಡರಾತ್ರಿ ಶಿರೋಳ ಕಾಡಸಿದ್ಧೇಶ್ವರ ದೇವರ ಜಾತ್ರೆಗೆ ತೆರಳುತ್ತಿದ್ದರು ಎನ್ನಲಾಗಿದೆ. ​ಈ ಸಂದರ್ಭದಲ್ಲಿ, ಸಕ್ಕರೆ…

Read More

ತಮಿಳುನಾಡಿನಲ್ಲಿ ಭೀಕರ ಬಸ್ ದುರಂತ: ಎರಡು ಸರ್ಕಾರಿ ಬಸ್‌ಗಳ ಡಿಕ್ಕಿ; 12 ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪ್ಪತ್ತೂರು ಬಳಿ ಇಂದು (ನವೆಂಬರ್ 30, ಭಾನುವಾರ) ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 12 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಎರಡು ಸರ್ಕಾರಿ ಬಸ್‌ಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ​ತಿರುಪ್ಪತ್ತೂರು ಸಮೀಪದ ಕುಮ್ಮಂಗುಡಿ-ಕುಂದ್ರಾಕ್ಕುಡಿ ಮಾರ್ಗದಲ್ಲಿ ಈ ಅಪಘಾತ ಸಂಭವಿಸಿದ್ದು, ಒಂದು ಬಸ್ ಕಾರೈಕುಡಿಯ ಕಡೆಗೆ ಮತ್ತು ಇನ್ನೊಂದು ಮಧುರೈನ ಕಡೆಗೆ ಪ್ರಯಾಣಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಡಿಕ್ಕಿಯ ತೀವ್ರತೆಗೆ ಬಸ್‌ಗಳ ಮುಂಭಾಗ…

Read More