ರೋಣ ಬಳಿ ಭೀಕರ ಅಪಘಾತ: ಮೂವರು ಮಹಿಳಾ ಕೃಷಿ ಕಾರ್ಮಿಕರ ದುರ್ಮರಣ, 15ಕ್ಕೂ ಹೆಚ್ಚು ಜನರಿಗೆ ಗಾಯ

​ರೋಣ: ತಾಲ್ಲೂಕಿನ ಜಿಗಳೂರ ಕ್ರಾಸ್ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳಾ ಕೃಷಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟು, 15ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿರುವ ಹೃದಯವಿದ್ರಾಹಕ ಘಟನೆ ನಡೆದಿದೆ. ಟಾಟಾ ಕ್ಯಾಂಟರ್ ಗೂಡ್ಸ್ ವಾಹನ ಮತ್ತು ಪ್ಯಾಸೆಂಜರ್ ಕ್ರೂಸರ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ಈ ದುರಂತಕ್ಕೆ ಕಾರಣವಾಗಿದೆ. ​ಗಜೇಂದ್ರಗಡ ಪಟ್ಟಣದ ಶಿವಾಜಿ ಪೇಟೆಯ ನಿವಾಸಿಗಳಾದ ಮರಿಯಂಬು ದಾದೇಸಾಬ್ ಹುನಗುಂದ (55), ಅನ್ನಪೂರ್ಣ ಲಕ್ಷ್ಮಣ ಚಂಗಳಿ (45) ಹಾಗೂ ಸುಜಾತಾ ರಾಜಪ್ಪ ಹೊಸಮನಿ…

Read More

​ಮೈಲಾರಲಿಂಗೇಶ್ವರ ಕಾರ್ಣಿಕ ಭವಿಷ್ಯ: “ಸಂಪಾಯಿತಲೇ ಪರಾಕ್” – ರಾಜ್ಯದಲ್ಲಿ ಸುಭಿಕ್ಷೆ ಮತ್ತು ಸಮೃದ್ಧಿಯ ಮುನ್ಸೂಚನೆ

​ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಜರುಗಿದ ಐತಿಹಾಸಿಕ ಮೈಲಾರಲಿಂಗೇಶ್ವರ ಸ್ವಾಮಿಯ ಕಾರ್ಣಿಕೋತ್ಸವದಲ್ಲಿ ಈ ವರ್ಷದ ದೈವವಾಣಿಯಾಗಿ “ಸಂಪಾಯಿತಲೇ ಪರಾಕ್” ಎಂಬ ನುಡಿ ಹೊರಬಿದ್ದಿದೆ. ಬುಧವಾರ ಸಂಜೆ ಸೂರ್ಯಾಸ್ತದ ಸುಮಾರಿಗೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆದ ಈ ಧಾರ್ಮಿಕ ವೈಭವದಲ್ಲಿ, ಪ್ರಸಿದ್ಧ ಭವಿಷ್ಯವಾಣಿ ವಾಚಕ ಗೊರವಯ್ಯನವರು ಬಿಲ್ಲನ್ನೇರಿ ಆಕಾಶದತ್ತ ದೃಷ್ಟಿ ನೆಟ್ಟು ಈ ಮೌಲ್ಯಯುತ ನುಡಿಯನ್ನು ಘೋಷಿಸಿದರು. ಗೊರವಪ್ಪನ ಮೂಲಕ ಸಾಕ್ಷಾತ್ ಈಶ್ವರನೇ ನುಡಿಯುವ ಈ ಭವಿಷ್ಯವಾಣಿಯು ಹೊರಬೀಳುತ್ತಿದ್ದಂತೆ ಇಡೀ ಮೈಲಾರ ಕ್ಷೇತ್ರವು…

Read More

ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯ ಎಚ್ಚರಿಕೆ: ಭದ್ರಾವತಿ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ ಪತ್ರ ವೈರಲ್

ಭದ್ರಾವತಿ: ತಾಲೂಕಿನ ತಹಶೀಲ್ದಾರ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರೊಬ್ಬರು, ತಮಗೆ ಏನಾದರೂ ತೊಂದರೆಯಾದರೆ ತಹಶೀಲ್ದಾರ್ ಅವರೇ ನೇರ ಹೊಣೆ ಎಂದು ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಚನ್ನಗಿರಿ ತಾಲೂಕಿನ ಅಟ್ಟಿಹಳ್ಳಿ ನಿವಾಸಿ ಆರ್.ಜಿ. ಅಭಿಷೇಕ್ ಎಂಬುವವರು ಭದ್ರಾವತಿ ತಹಶೀಲ್ದಾರ್ ಪರಸಪ್ಪ ಕುರುಬರ ಅವರ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದು, ತಹಶೀಲ್ದಾರ್ ಅವರ ಅತಿಯಾದ ಒತ್ತಡದಿಂದಾಗಿ ತಾವು ಸಿದ್ದಾಪುರ ಚಾನಲ್‌ಗೆ ಹಾರಿ ಆತ್ಮಹತ್ಯೆ…

Read More

ಶಾಲಾ ಮಕ್ಕಳ ಬಾಯಾರಿಕೆ ನೀಗಿಸದ ಅಧಿಕಾರಿಗಳ ನಡೆಗೆ ಆಕ್ರೋಶ: ಎಮ್.ಎಸ್.ದೊಡ್ಡಿಯಲ್ಲಿ ನೀರಿನ ಹಾಹಾಕಾರ, ಪ್ರತಿಭಟನೆಯ ಎಚ್ಚರಿಕೆ

ಹನೂರು:ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಮ್.ಎಸ್.ದೊಡ್ಡಿ ಗ್ರಾಮದಲ್ಲಿ ಸಾರ್ವಜನಿಕರು ಹಾಗೂ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಸ್ಥಳೀಯ ಆಡಳಿತ ಸಂಪೂರ್ಣ ವಿಫಲವಾಗಿದ್ದು, ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನು ಗ್ರಾಮದ ಮುಖಂಡ ಎಮ್.ಎಸ್.ಶಿವಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ. ಶಿಕ್ಷಣದ ಜೊತೆಗೆ ಕನಿಷ್ಠ ಕುಡಿಯುವ ನೀರನ್ನು ನೀಡಲಾಗದ ಇಂತಹ ದುಸ್ಥಿತಿಯಲ್ಲಿ ನಾವಿದ್ದೇವೆ ಎಂಬುದು ವಿಷಾದನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗ್ರಾಮದಲ್ಲಿ ನೀರಿನ ಅಭಾವ ತಾರಕಕ್ಕೇರಿದ್ದು, ಶಾಲಾ ಮಕ್ಕಳು ಹನಿ ನೀರಿಗೂ ಪರದಾಡುವಂತಾಗಿದೆ. ಈ ಕುರಿತು…

Read More

ಕೊಟ್ಟೂರು ಬೆಚ್ಚಿಬೀಳಿಸಿದ ಭೀಕರ ತ್ರಿವಳಿ ಕೊಲೆ: ಮನೆಯ ಹಾಲ್‌ನಲ್ಲೇ ತಂದೆ-ತಾಯಿ-ತಂಗಿ ಶವ ಹೂತಿಟ್ಟ ನರಹಂತಕ ಮಗ!

​ವಿಜಯನಗರ: ಕೊಟ್ಟೂರು ಪಟ್ಟಣದಲ್ಲಿ ಬೆಚ್ಚಿಬೀಳಿಸುವಂತ ಭೀಕರ ತ್ರಿವಳಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಹೆತ್ತ ತಂದೆ-ತಾಯಿ ಹಾಗೂ ತಂಗಿಯನ್ನು ಭೀಕರವಾಗಿ ಹತ್ಯೆಗೈದ ನರಹಂತಕ ಮಗ, ಮನೆಯ ಹಾಲ್‌ನಲ್ಲೇ ಶವಗಳನ್ನು ಹೂತಿಟ್ಟು ವಿಕೃತಿ ಮೆರೆದಿದ್ದಾನೆ. ಬೆಂಗಳೂರಿನ ತಿಲಕ್ ನಗರ ಠಾಣೆ ಪೊಲೀಸರು ಹಾಗೂ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಶನಿವಾರ ನಡೆಸಿದ ಕಾರ್ಯಾಚರಣೆಯಲ್ಲಿ ಒಂದೇ ಕುಣಿಯಲ್ಲಿ ಹೂತಿಟ್ಟಿದ್ದ ಮೂರು ಮೃತದೇಹಗಳು ಪತ್ತೆಯಾಗಿವೆ. ಆರೋಪಿ ಅಕ್ಷಯ್ ತಂದೆ ಭೀಮರಾವ್ (50), ತಾಯಿ ಜಯಲಕ್ಷ್ಮಿ (45) ಮತ್ತು ತಂಗಿ ಎಚ್.ಅಮೃತಾ (17) ಅವರನ್ನು…

Read More

​ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಇಥೆನಾಲ್ ಟ್ಯಾಂಕರ್ ಪಲ್ಟಿ; ಬೆಂಕಿಗಾಹುತಿಯಾದ ಲಾರಿ

ಯಲ್ಲಾಪುರ: ತಾಲೂಕಿನ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63ರ ತಿರುವಿನಲ್ಲಿ ಇಥೆನಾಲ್ ತುಂಬಿದ್ದ ಟ್ಯಾಂಕರ್ ಲಾರಿಯೊಂದು ಪಲ್ಟಿಯಾಗಿ ಭೀಕರ ಬೆಂಕಿ ಅನಾಹುತ ಸಂಭವಿಸಿದ ಘಟನೆ ಜ.31ರ ಶನಿವಾರ ಸಂಜೆ ನಡೆದಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಇಡೀ ಲಾರಿ ಧಗಧಗನೆ ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾಗಿದೆ. ​ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಚಗೇರಿ ನಿವಾಸಿ ಶಿವಾನಂದ ಬೀರಾದಾರ್ ಎಂಬುವವರು ಇಥೆನಾಲ್ ತುಂಬಿದ ಟ್ಯಾಂಕರ್ ಅನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದರು….

Read More

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರಿಗೆ ಮೂಲಸೌಕರ್ಯ ಕೊರತೆ: ಸಮಗ್ರ ಅಭಿವೃದ್ಧಿಗೆ ನವಯುಗ ಸಂಘಟನೆ ಆಗ್ರಹ

ಬೆಳಗಾವಿ: ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಸವದತ್ತಿ ಶ್ರೀ ಯಲ್ಲಮ್ಮನ ಗುಡ್ಡಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಕನಿಷ್ಠ ಮೂಲಸೌಕರ್ಯಗಳೂ ಇಲ್ಲದೆ ತೀವ್ರ ತೊಂದರೆಯಾಗುತ್ತಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹುಬ್ಬಳ್ಳಿಯ ‘ನವಯುಗ ಸಂಘಟನೆ’ಯು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಪ್ರತಿ ಹುಣ್ಣಿಮೆ ಹಾಗೂ ಅಮವಾಸ್ಯೆಯಂದು ಲಕ್ಷಾಂತರ ಜನ ಸೇರುವ ಈ ಪುಣ್ಯಕ್ಷೇತ್ರದಲ್ಲಿ ವ್ಯವಸ್ಥೆಗಳು ಸಂಪೂರ್ಣ ಹದಗೆಟ್ಟಿವೆ ಎಂದು ಸಂಘಟನೆಯು ಆಕ್ರೋಶ ವ್ಯಕ್ತಪಡಿಸಿದೆ. ​ಜೋಗುಳ ಭಾವಿ ಹಾಗೂ ಸತ್ಯವ್ವಾ ದೇವಸ್ಥಾನದ ಬಳಿ ಮಹಿಳಾ ಭಕ್ತರಿಗೆ…

Read More

​ಕೋಲಾರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ‘ನಾನೇ ಕೊಂದಿದ್ದು’ ಎಂದು ವಿಡಿಯೋ ಬಿಡುಗಡೆ ಮಾಡಿದ ಆರೋಪಿ!

​ಕೋಲಾರ: ಜಿಲ್ಲೆಯ ಮೆಟ್ಟುಬಂಡೆ ಬಳಿ ಜನವರಿ 27 ರಂದು ನಡೆದಿದ್ದ ಯಲ್ಲೇಶ್ (41) ಎಂಬುವವರ ಭೀಕರ ಹತ್ಯೆ ಪ್ರಕರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಬಿಂದು ಕುಮಾರ್ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಹತ್ಯೆಯ ಹೊಣೆಯನ್ನು ತಾನೇ ಹೊತ್ತುಕೊಳ್ಳುವ ಮೂಲಕ ಪೊಲೀಸರಿಗೆ ಸವಾಲು ಹಾಕಿದ್ದಾನೆ. ​ಸೇಡಿನ ಕಿಚ್ಚಿಗೆ ಬಲಿಯಾದ ಯಲ್ಲೇಶ್: ನರಸಾಪುರದ ಸಂತೋಷ್ ಎಂಬುವವರ ಪುತ್ರ ಬಿಂದು ಕುಮಾರ್, ತಾನು ಹಾಗೂ ಅಕ್ಷಯ್ ತಂಡ ಸೇರಿ ಈ ಕೃತ್ಯ ಎಸಗಿರುವುದಾಗಿ…

Read More