ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಬಿ. ರಾಜೇಶ್ವರಿ ಆಯ್ಕೆ

  ಹನೂರು: ಚಾಮರಾಜನಗರ ಜಿಲ್ಲಾ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ನಗರದ ಸೂರ್ಯೋದಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ–2026 ಕಾರ್ಯಕ್ರಮದಲ್ಲಿ ಮಣಗಳ್ಳಿ ಗ್ರಾಮದ ಹನಿಕೇತನ ವಿದ್ಯಾ ಸಂಸ್ಥೆಯ ಕುವೆಂಪು ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಬಿ. ರಾಜೇಶ್ವರಿ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.   ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಲಿಂಗರಾಜ್, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಾಸಕ್ಕೆ ಬಿ. ರಾಜೇಶ್ವರಿ ಅವರು ನೀಡಿರುವ ಕೊಡುಗೆ…

Read More

ಗೌರಿ ಗಣೇಶ ಹಬ್ಬದ ಹಿನ್ನೆಲೆ: ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ₹2.21 ಕೋಟಿ ಸಂಗ್ರಹ

ಹನೂರು, ಸೆ.22: ಪ್ರಸಿದ್ಧ ಯಾತ್ರಾಸ್ಥಳವಾದ ಶ್ರೀ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರದ ಹುಂಡಿ ಎಣಿಕೆ ಕಾರ್ಯ ಸೋಮವಾರ (ಸೆ.22) ನೆರವೇರಿತು. ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಬಾರಿ ಹುಂಡಿ ಸಂಗ್ರಹದಲ್ಲಿಯೂ ಗಣನೀಯ ಏರಿಕೆ ಕಂಡುಬಂದಿದೆ.   ಸಾಲೂರು ಬೃಹನ್ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಅವರ ನೇತೃತ್ವದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹುಂಡಿ ಎಣಿಕೆ ಕಾರ್ಯ ಆರಂಭಿಸಲಾಯಿತು.  …

Read More

ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸವ ಧರ್ಮಪೀಠದ ನೂತನ ಆಶ್ರಮದ ನಾಂದಿ ಪೂಜೆ

ಹನೂರು: ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸವ ಧರ್ಮಪೀಠದ ವತಿಯಿಂದ ನೂತನವಾಗಿ ಖರೀದಿಸಲಾದ ಆಶ್ರಮದ ಜಮೀನಿನಲ್ಲಿ ನಾಂದಿ ಪೂಜಾ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಶ್ರದ್ಧೆಯಿಂದ ನೆರವೇರಿಸಲಾಯಿತು.   ಬಸವ ಧರ್ಮಪೀಠದ ಅಧ್ಯಕ್ಷರಾದ ಶ್ರೀಮನ್ನಿರಂಜನ ಮಹಾಜಗದ್ಗುರು ಡಾ. ಮಾತೆ ಗಂಗಾದೇವಿ ಮಾತಾಜಿ ಅವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ನಾಂದಿ ಪೂಜಾ ಕಾರ್ಯಕ್ರಮ ನಡೆಯಿತು.   ಕಾರ್ಯಕ್ರಮದಲ್ಲಿ ಪೂಜ್ಯ ಜಗದ್ಗುರು ಬಸವಕುಮಾರ ಸ್ವಾಮೀಜಿ, ಪೂಜ್ಯ ಜಗದ್ಗುರು ಜ್ಞಾನೇಶ್ವರಿ ಮಾತಾಜಿ, ಪೂಜ್ಯ ಜಗದ್ಗುರು ದಾನೇಶ್ವರಿ ಮಾತಾಜಿ, ಮಾತೆ ವಿಜಯಾಂಬಿಕೆ, ಪೂಜ್ಯ ಅನಿಮಿಷಾನಂದ ಸ್ವಾಮೀಜಿ,…

Read More

ಹನೂರಿನಲ್ಲಿ ₹1.01 ಕೋಟಿ ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿಗೆ ಭೂಮಿಪೂಜೆ

ವರದಿ :ಕಾರ್ತಿಕ್ ಗೌಡ ಹನೂರು. ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ 15ನೇ ಹಣಕಾಸು ಹಾಗೂ ಎಸ್‌ಎಫ್‌ಸಿ ಅನುದಾನದಡಿ ಒಟ್ಟು 1.01 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಶಾಸಕ ಎಂ.ಆರ್. ಮಂಜುನಾಥ್ ಅವರು ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದರು.   ಪಟ್ಟಣದ 7ನೇ ವಾರ್ಡ್‌ನಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವುದು ಹಾಗೂ…

Read More

ಬಡವರ ವೇಳಾಂಗಣಿ ಎಂದು ಖ್ಯಾತಿ ಪಡೆದಿರುವ ಹನೂರಿನ ಆರೋಗ್ಯ ಮಾತೆಯ ಹಬ್ಬ.

ಹನೂರು ಪಟ್ಟಣದ ಹೃದಯ ಭಾಗದಲ್ಲಿರುವ ಆರೋಗ್ಯ ಮಾತೆಯ ದೇವಾಲಯ ಸುಮಾರು ಐದು ದಶಕಗಳಿಂತಲೂ ಹೆಚ್ಚು  ಈ ಭಾಗದಲ್ಲಿರುವ ಭಕ್ತರ ಪಾಲಿಗೆ ಆಶಾಕಿರಣವಾಗಿದೆ. ಇಡೀ ವಿಶ್ವದೆಲ್ಲೆಡೆ ಸೆಪ್ಟೆಂಬರ್ 8 ರಂದು ಮಾತೆ ಮರಿಯಮ್ಮನವರ ಜನ್ಮ ದಿನವನ್ನು ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ. ಹನೂರಿನಲ್ಲಿ ಸೆಪ್ಟೆಂಬರ್ ತಿಂಗಳ ಎರಡನೆಯ ಭಾನುವಾರ ಇಲ್ಲವೇ ಮೂರನೆಯ ಭಾನುವಾರ ಆಚರಿಸುವುದು ಪ್ರತೀತಿ. ಜಗದ್ರಕ್ಷಕರಾದ ಯೇಸುವಿನ ತಾಯಿಯ ಹಬ್ಬವಾದ್ದರಿಂದ ಎಲ್ಲೆಡೆಯಲ್ಲಿಯೂ ಈ ಹಬ್ಬಕ್ಕೆ ಜಿಲ್ಲೆಯ ಮೂಲೆ ಮೂಲೆಗಳಿಂದ ಹಾಗೂ ದೂರದ ಊರೂರುಗಳಿಂದ ಶ್ರದ್ಧಾ ಭಕ್ತಿಯಿಂದ…

Read More

ಕರಿಕಲ್ಲು ಗುಡ್ಡ ಶೂಟ್‌ಔಟ್ ಪ್ರಕರಣ: ಮೂವರಿಗೆ ನಿರೀಕ್ಷಣಾ ಜಾಮೀನು ಮಂಜೂರು

ವರದಿ: ಕಾರ್ತಿಕ್ ಗೌಡ, ಹನೂರು ಚಾಮರಾಜನಗರ: ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದ ಹೊಳೆಮುರಿದಟ್ಟಿ ಕರಿಕಲ್ಲು ಗುಡ್ಡದಲ್ಲಿ ಆಗಸ್ಟ್ 15ರಂದು ನಡೆದ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ರಕ್ಷಕ ಶಿವರಾಜ್ ಸಾಸಲವಾಡೆ ಹಾಗೂ ವಾಚರ್‌ಗಳಾದ ಶಿವಲಿಂಗ ನಾಯ್ಕ ಮತ್ತು ಗಿರೀಶ್ ಅವರಿಗೆ ಕೊಳ್ಳೇಗಾಲದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆಗಸ್ಟ್ 15ರ ಮುಂಜಾನೆ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಹೊಳೆಮುರಿದಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮರಿಯಮಂಗಲ ಗ್ರಾಮದ ಅಂತೋಣಿಸ್ವಾಮಿ, ಲಾಸರ್…

Read More

ಹನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲದ ಕೊರತೆ: ಸಿಲಿಂಡರ್‌ಗಾಗಿ ದಿನವಿಡೀ ಕಾಯುವ ಸ್ಥಿತಿ

ಹನೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲದ ಕೊರತೆ: ಸಿಲಿಂಡರ್‌ಗಾಗಿ ದಿನವಿಡೀ ಕಾಯುವ ಸ್ಥಿತಿ ವರದಿ: ಕಾರ್ತಿಕ್ ಗೌಡ, ಹನೂರು ಹನೂರು: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದ ತಪ್ಪಲಿನ ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆ ಅನಿಲ (LPG) ಸಿಲಿಂಡರ್‌ಗಳ ಕೊರತೆ ಉಂಟಾಗಿದ್ದು, ಗ್ರಾಮಸ್ಥರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಂದೆಡೆ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಎದುರಾಗಿ ಜನರು ಸಂಕಷ್ಟದಲ್ಲಿದ್ದರೆ, ಮತ್ತೊಂದೆಡೆ ಕುಟುಂಬದ ಅಡುಗೆಗೆ ಅಗತ್ಯವಾದ ಸಿಲಿಂಡರ್‌ಗಳು ಸಮಯಕ್ಕೆ ಸರಿಯಾಗಿ ದೊರೆಯದೆ ಪರದಾಡುವಂತಾಗಿದೆ. ಅಡುಗೆ ಅನಿಲ ಸಿಲಿಂಡರ್‌ಗಾಗಿ…

Read More

ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ವಿಶ್ವಕ್ಕೆ ದಾರಿದೀಪ: ಶಾಸಕ ಎಂ.ಆರ್. ಮಂಜುನಾಥ್

ಬುದ್ಧನ ಶಾಂತಿ, ಸಮಾನತೆ ಹಾಗೂ ಮಾನವೀಯತೆಯ ಸಂದೇಶ ವಿಶ್ವಕ್ಕೆ ದಾರಿದೀಪ: ಶಾಸಕ ಎಂ.ಆರ್. ಮಂಜುನಾಥ್ ವರದಿ: ಕಾರ್ತಿಕ್ ಗೌಡ, ಹನೂರು ಹನೂರು: ಗೌತಮ ಬುದ್ಧರು ಸಾರಿದ ಶಾಂತಿ, ಸಮಾನತೆ, ಕರುಣೆ ಹಾಗೂ ಮಾನವೀಯತೆಯ ಸಂದೇಶಗಳು ಇಡೀ ವಿಶ್ವಕ್ಕೆ ದಾರಿದೀಪವಾಗಿವೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು. ಹನೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂತರರಾಷ್ಟ್ರೀಯ ಬೌದ್ಧ ಸಮ್ಮೇಳನದ ಅಂಗವಾಗಿ ಆಯೋಜಿಸಿದ್ದ ‘ದಮ್ಮ ಪಯಣ’ ಜಾಗೃತಿ ಜಾಥಾದ ರಥಕ್ಕೆ ಶಾಸಕ ಎಂ.ಆರ್. ಮಂಜುನಾಥ್ ಪುಷ್ಪಾರ್ಚನೆ…

Read More

ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು

ಹನೂರು ಬಫರ್ ವಲಯದಲ್ಲಿ ಜಿಂಕೆ ಬೇಟೆ: ಎದೆಯ ಭಾಗ, ಎರಡು ಮುಂಗಾಲು ಕತ್ತರಿಸಿ ಪರಾರಿ; ಪ್ರಕರಣ ದಾಖಲು ವರದಿ: ಕಾರ್ತಿಕ್ ಗೌಡ, ಹನೂರು ಹನೂರು: ಕರಿಕಲ್ಲು ಗುಡ್ಡ ಶೂಟ್‌ಔಟ್ ಪ್ರಕರಣದ ಬೆನ್ನಲ್ಲೇ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಬೇಟೆಗಾರರ ಹಾವಳಿ ಮತ್ತೆ ಹೆಚ್ಚಾಗಿದೆ. ಹನೂರು ಬಫರ್ ವಲಯದಲ್ಲಿ ಗಂಡು ಜಿಂಕೆಯೊಂದನ್ನು ಗುಂಡು ಹಾರಿಸಿ ಕೊಂದು, ಅದರ ಎದೆಯ ಭಾಗ ಹಾಗೂ ಎರಡು ಮುಂಗಾಲುಗಳನ್ನು ಕತ್ತರಿಸಿಕೊಂಡು ಬೇಟೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ. ಹನೂರು ವನ್ಯಜೀವಿ ಉಪವಿಭಾಗದ ಪಚ್ಚೆದೊಡ್ಡಿ ಶಾಖೆಯ ವ್ಯಾಪ್ತಿಯಲ್ಲಿ…

Read More

ಕಾಲೇಜು ಹಾಸ್ಟೆಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿನಿ ದಾರುಣ ಸಾವು; ಕುಟುಂಬಸ್ಥರಿಂದ ಅನುಮಾನ, ತನಿಖೆಗೆ ಆಗ್ರಹ

ದಾವಣಗೆರೆ: ನೋಡಲು ಅಚ್ಚುಕಟ್ಟಾಗಿ, ಮುದ್ದು ಮುಖದ, ಓದಿನಲ್ಲೂ ಸದಾ ಮುಂದಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್‌ನಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದು, ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತುಕೊಂಡಿದ್ದ ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಅವರ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ. ದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ, ನಾಲ್ಕೈದು ದಿನಗಳ ಹಿಂದಷ್ಟೇ…

Read More