ಸೌಜನ್ಯ ಪ್ರಕರಣ: “ಅನಾಮಿಕರ ಹಿಂದೆ ನಾವಿದ್ದೇವೆ, ಆರೋಪಗಳಿಗೆ ಎಸ್‌ಐಟಿ ತನಿಖೆ ಎದುರಿಸಲು ಸಿದ್ಧ” – ಹೋರಾಟಗಾರರು
ಬೆಳ್ತಂಗಡಿ: ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನ್ಯಾಯಕ್ಕಾಗಿ ಹೋರಾಡುತ್ತಿರುವ ಸೌಜನ್ಯ ಪರ ಹೋರಾಟಗಾರರಾದ ಗಿರೀಶ್ ಮಟ್ಟಣ್ಣನವರ್ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಅವರು, ತಮ್ಮ ಹಿಂದೆ “ಅನಾಮಿಕ ವ್ಯಕ್ತಿ” ಇದ್ದಾರೆಂಬ ಆರೋಪವನ್ನು ತಳ್ಳಿ ಹಾಕಿದ್ದಾರೆ. “ಯಾರೋ ಒಬ್ಬ ವ್ಯಕ್ತಿ ಹಿಂದೆ ಇಲ್ಲ, ನಮ್ಮಂತಹ ನೂರಾರು ಜನರು ಈ ಹೋರಾಟದ ಜೊತೆಗಿದ್ದಾರೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರವಿವಾರ ಪತ್ರಕರ್ತರೊಂದಿಗೆ ಜಂಟಿಯಾಗಿ ಮಾತನಾಡಿದ ಅವರು, ಈ ಹೋರಾಟಕ್ಕಾಗಿ ತಾವು ವಿದೇಶದಿಂದ ಹಣ…

