ಯೂರಿಯಾ ಗೊಬ್ಬರಕ್ಕೆ ಪರದಾಟ: ಹೊಸಪೇಟೆ-ಹರಿಹರ ರಸ್ತೆ ತಡೆಗೆ ಮುಂದಾದ ಹ,ಬೊಮ್ಮನಹಳ್ಳಿ ರೈತರು
ಹಗರಿಬೊಮ್ಮನಹಳ್ಳಿ: ಯೂರಿಯಾ ಗೊಬ್ಬರಕ್ಕೆ ತಾಲೂಕಿನಾದ್ಯಂತ ರೈತರು ಪರದಾಡುತ್ತಿದ್ದು, ಹಳೇ ಊರಿನ ಸೊಸೈಟಿಗೆ ಬರಬೇಕಿದ್ದ 20 ಟನ್ ಗೊಬ್ಬರ ಬಾರದಿರುವುದು ಸೋಮವಾರ ರೈತರ ಆಕ್ರೋಶಕ್ಕೆ ಕಾರಣವಾಯಿತು. ಸಿಟ್ಟಿಗೆದ್ದ ರೈತರು ಹರಿಹರ-ಹೊಸಪೇಟೆ ಹೆದ್ದಾರಿಯಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಘಟನೆ ವಿವರಬೆಳಗ್ಗೆ 4-5 ಗಂಟೆಯಿಂದಲೇ ರೈತರು, ವಿಶೇಷವಾಗಿ ಮಹಿಳೆಯರು, ರಸಗೊಬ್ಬರ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಗೊಬ್ಬರ ಬರಲಿಲ್ಲ ಎಂಬ ಸುದ್ದಿ ಹರಡುತ್ತಿದ್ದಂತೆಯೇ ರೈತರು ಆಕ್ರೋಶಗೊಂಡರು. ಸೊಸೈಟಿ ಬಳಿಯ ಮುಖ್ಯ ರಸ್ತೆಯನ್ನು…

