ಶಿಗ್ಗಾಂವಿ: ಸೋರುತ್ತಿದೆ ಬಂಕಾಪುರ ಸರ್ಕಾರಿ ಆಸ್ಪತ್ರೆ, ರೋಗಿಗಳ ಸಂಕಟಕ್ಕೆ ಅಂತ್ಯವಿಲ್ಲ

ಶಿಗ್ಗಾಂವಿ: ಮೂರು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಗೆ ಬಂಕಾಪುರ ಸರ್ಕಾರಿ ಆಸ್ಪತ್ರೆಯ ಹೊಸ ಕಟ್ಟಡ ಸೋರುತ್ತಿದ್ದು, ಚಿಕಿತ್ಸೆಗಾಗಿ ಬರುವ ರೋಗಿಗಳು ಮತ್ತಷ್ಟು ಸಂಕಟಕ್ಕೆ ಸಿಲುಕಿದ್ದಾರೆ. ಇದು ಕೇವಲ ಗೋಡೆಗಳಿಂದ ನೀರು ಸೋರುತ್ತಿರುವ ವಿಷಯವಲ್ಲ, ಬದಲಾಗಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ರೋಗಿಗಳ ಆರೋಗ್ಯ ಮತ್ತು ಸುರಕ್ಷತೆ ಅಪಾಯಕ್ಕೊಳಗಾಗಿರುವ ಗಂಭೀರ ಸಮಸ್ಯೆಯಾಗಿದೆ. ಆಸ್ಪತ್ರೆಯ ಜನರಲ್ ವಾರ್ಡ್‌ನ ಹಾಸಿಗೆಗಳ ಬಳಿಯೇ ನೀರು ತೊಟ್ಟಿಕ್ಕುತ್ತಿರುವುದರಿಂದ ರೋಗಿಗಳು ತಮ್ಮ ರೋಗದ ನೋವಿನ ಜೊತೆಗೆ ಸೋರುತ್ತಿರುವ ಕಟ್ಟಡದ ಕಿರಿಕಿರಿಯನ್ನೂ ಸಹಿಸಿಕೊಳ್ಳುವಂತಾಗಿದೆ. ಗ್ರಾಮೀಣ ಭಾಗದ ಜನರಿಗೆ ಇದೇ ಆಸ್ಪತ್ರೆ…

Read More

ಹಾವೇರಿ:ಕಡರನಾಯ್ಕನಹಳ್ಳಿ: ತುಂಗಭದ್ರಾ ನದಿ ಪ್ರವಾಹಕ್ಕೆ ಉಕ್ಕಡಗಾತ್ರಿ ಜಲಾವೃತ

ಹಾವೇರಿ:ಕಡರನಾಯ್ಕನಹಳ್ಳಿ: ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದ ಕಾರಣ ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಹಾವೇರಿ ಜಿಲ್ಲೆಯ ಕಡರನಾಯ್ಕನಹಳ್ಳಿ ಸಮೀಪದ ಉಕ್ಕಡಗಾತ್ರಿ ಪರಿಸರ ಜಲಾವೃತಗೊಂಡಿದೆ. ಇದರಿಂದಾಗಿ ರೈತರು ಮತ್ತು ಸ್ಥಳೀಯರು ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಸಂಚಾರಕ್ಕೆ ಅಡಚಣೆ, ಭಕ್ತರಿಗೆ ತೊಂದರೆ:ಉಕ್ಕಡಗಾತ್ರಿ-ಪತ್ಯಾಪುರ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ರಾಣೇಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಮೂಲಕ ಮಾಳನಾಯ್ಕನಹಳ್ಳಿ ಮಾರ್ಗವಾಗಿ ಉಕ್ಕಡಗಾತ್ರಿಗೆ ತಲುಪುವ ರಸ್ತೆಯೂ ಜಲಾವೃತಗೊಳ್ಳುವ ಸಾಧ್ಯತೆ ಇದೆ.ಶ್ರಾವಣ ಸೋಮವಾರದಂದು ಅಜ್ಜಯ್ಯನ ದರ್ಶನಕ್ಕೆ ಬಂದ ಭಕ್ತರು ಹೆಚ್ಚಾಗಿದ್ದು, ಪ್ರವಾಹದಿಂದಾಗಿ ಅವರಿಗೆ…

Read More

ದುರಂತ: ಹಾವೇರಿ ಬಳಿ ಮೋಟೆಬೆನ್ನೂರ ಗ್ರಾಮದ‌ ರಾಷ್ಟ್ರೀಯ ಹೆದ್ದಾರಿ (48)ರಲ್ಲಿ ಬಸ್ ಅಪಘಾತ, ಇಬ್ಬರು ಸಾವು, ಆರು ಮಂದಿಗೆ ಗಾಯ

ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್​ವೊಂದು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕಿನ ಮೊಟೇಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ನಡೆದಿದೆ. ಮೃತಪಟ್ಟವರನ್ನು ಬಾಲಕಿ ಅರ್ನವಿ (11 ವರ್ಷ) ಹಾಗೂ ಯಶ್ (20 ವರ್ಷ) ಎಂದು ಗುರುತಿಸಲಾಗಿದೆ. ಈ ಬಸ್ ಮಹಾರಾಷ್ಟ್ರದ ಸಾಂಗ್ಲಿಯಿಂದ ತಮಿಳುನಾಡು ಕಡೆಗೆ ಹೊರಟಿತ್ತು. ಘಟನಾ ವಿವರ:ಮೊಟೇಬೆನ್ನೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬಸ್ಸು ಹೋಗುತ್ತಿದ್ದಾಗ,…

Read More