ಸರ್ಕಾರಿ ಆದೇಶಕ್ಕ ಇಲ್ಲಾ ಕಿಮ್ಮತ್ತು ಕುಂದಗೋಳ ಪಟ್ಟಣದ ಖಾಸಗಿ ಜಮೀನಿನಲ್ಲಿ ಕಸ ವಿಲೆವಾರಿ
ಧಾರವಾಡ: ಕುಂದಗೋಳ ಪಟ್ಟಣದ ಕಡಪಟ್ಟಿ ರಸ್ತೆಯಲ್ಲಿ ನಿರ್ಮಿಸಲಾದ ಘನತ್ಯಾಜ್ಯ ನಿರ್ವಹಣಾ ಘಟಕವು ಇಂದು ಕೇವಲ ಒಂದು ಸ್ಮಾರಕವಾಗಿ ಉಳಿದಿದೆ. ಸ್ವಚ್ಛ ಭಾರತ ಮಿಷನ್ ಎಮ್ ಆರ್ ಎಪ್ 32 ಲಕ್ಷ ಅನೂದಾನ ಹಾಗೂ ಎಪ್ ಎಸ್ ಡಿ ಪಿ 1 ಕೋಟಿ 32 ಲಕ್ಷ ಅನೂದಾನ ಹೀಗೆ ಒಟ್ಟು ಅಂದಾಜು 1 ಕೋಟಿ 62 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾದ ಈ ಎರಡು ಘಟಗಳು ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಗೊಬ್ಬರ ತಯಾರಿಸುವ ಮಹತ್ವದ ಉದ್ದೇಶ…

