ಕುಂದಗೋಳ ಭೂ ಮಾಪನ ಇಲಾಖೆಯ ಲಂಚಬಾಕ ಸರ್ವೆಯರ್‌ಗೆ 4 ವರ್ಷ ಜೈಲು ಶಿಕ್ಷೆ: ಭ್ರಷ್ಟ ಅಧಿಕಾರಿಗಳಿಗೆ ಧಾರವಾಡ ನ್ಯಾಯಾಲಯದ ಬಿಸಿ
ಧಾರವಾಡ: ರೈತನ ಜಮೀನು ಅಳತೆ ಮಾಡಿ ಪೋಡಿ ಮಾಡಿಕೊಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಕುಂದಗೋಳ ಭೂಮಾಪನ ಇಲಾಖೆಯ ಸರ್ವೆಯರ್‌ಗೆ ಧಾರವಾಡದ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕರ ಕೆಲಸ ಮಾಡಿಕೊಡಲು ಹಣದ ಆಸೆ ತೋರಿಸುವ ಭ್ರಷ್ಟ ಅಧಿಕಾರಿಗಳಿಗೆ ಈ ತೀರ್ಪು ಒಂದು ಎಚ್ಚರಿಕೆಯ ಗಂಟೆಯಾಗಿದೆ. ಕುಂದಗೋಳ ಭೂಮಾಪನ ಇಲಾಖೆಯಲ್ಲಿ ಸರ್ವೆಯರ್ ಆಗಿದ್ದ ರಾಘವೇಂದ್ರ ಶಂಕರರಾವ ಕುಲಕರ್ಣಿ ಎಂಬುವವರೇ ಶಿಕ್ಷೆಗೊಳಗಾದ ಭ್ರಷ್ಟ ಅಧಿಕಾರಿ. ಕುಂದಗೋಳ ತಾಲೂಕಿನ ಶಿರೂರು ಗ್ರಾಮದ ಮಲ್ಲಿಕಾರ್ಜುನಗೌಡ ಭರಮಗೌಡ…

