ಮಹಾರಾಷ್ಟ್ರ ಪ್ರವಾಹ ಸಂತ್ರಸ್ತರ ನೆರವಿಗೆ ‘ಮಹಾಯುತಿ’ ಮೈತ್ರಿಕೂಟ: ಒಂದು ತಿಂಗಳ ಸಂಬಳ ದಾನ

ಮುಂಬೈ: ಮಹಾರಾಷ್ಟ್ರದ ಮರಾಠವಾಡ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹದಿಂದ ಸಂತ್ರಸ್ತರಾಗಿರುವವರಿಗೆ ನೆರವಾಗಲು ಆಡಳಿತರೂಢ ‘ಮಹಾಯುತಿ’ ಮೈತ್ರಿಕೂಟವು ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೈತ್ರಿಕೂಟದ ಭಾಗವಾಗಿರುವ ಬಿಜೆಪಿ, ಶಿವಸೇನಾ ಮತ್ತು ಎನ್‌ಸಿಪಿ ಪಕ್ಷಗಳ ಶಾಸಕರು ಹಾಗೂ ಸಚಿವರು ತಮ್ಮ ಒಂದು ತಿಂಗಳ ವೇತನವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಿದ್ದಾರೆ. ಮಹಾರಾಷ್ಟ್ರ ಸಚಿವರು ಮತ್ತು ಸಂಸದರೂ ಸಹ ಒಂದು ತಿಂಗಳ ವೇತನವನ್ನು ದೇಣಿಗೆಯಾಗಿ ನೀಡಲಿದ್ದಾರೆ ಎಂದು ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳು ಪ್ರತ್ಯೇಕವಾಗಿ ಪ್ರಕಟಿಸಿವೆ….

Read More

75 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಯೋಜನೆಗಳಿಗೆ ಮೋದಿ ಚಾಲನೆ: ಅರುಣಾಚಲ ಪ್ರದೇಶದಲ್ಲಿ ಅಭಿವೃದ್ಧಿ ಪರ್ವ

ಇಟಾನಗರ: ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿ, ₹75,125 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದು ರಾಜ್ಯದ ಮೂಲಸೌಕರ್ಯ ಮತ್ತು ವಿದ್ಯುತ್ ಉತ್ಪಾದನಾ ಸಾಮರ್ಥ್ಯಕ್ಕೆ ಹೊಸ ವೇಗ ನೀಡಲಿದೆ ಎಂದು ವಿಶ್ಲೇಷಿಸಲಾಗಿದೆ. ಇಟಾನಗರದ ಇಂದಿರಾ ಗಾಂಧಿ ಉದ್ಯಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು, ಶಿಯೋಮಿ ಜಿಲ್ಲೆಯಲ್ಲಿ ಹರಿಯುವ ಯಾರ್ಜೆಪ್ ನದಿಯಲ್ಲಿ ನಿರ್ಮಿಸಲಾಗುವ ಪ್ರಮುಖ ಜಲವಿದ್ಯುತ್ ಯೋಜನೆಗಳಾದ ಟಾಟೋ-1 (Tato-I) ಮತ್ತು ಎಚ್‌ಇಒ (HEO) ಯೋಜನೆಗಳಿಗೆ ಶಂಕುಸ್ಥಾಪನೆ…

Read More

ದುಬೈನಲ್ಲಿ ವಿಆರ್‌ಎಲ್‌ನ ಎಂ ಡಿ, ಆನಂದ ಸಂಕೇಶ್ವರಗೆ ಪ್ರತಿಷ್ಠಿತ ‘ಸೌತ್ ಇಂಡಿಯಾ ಬ್ಯುಸಿನೆಸ್ ಪ್ರಶಸ್ತಿ’

ಬೆಂಗಳೂರು: ದೇಶದ ಪ್ರಮುಖ ಸಾರಿಗೆ ಸಂಸ್ಥೆಗಳಲ್ಲಿ ಒಂದಾದ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಆನಂದ ಸಂಕೇಶ್ವರ ಅವರಿಗೆ ಪ್ರತಿಷ್ಠಿತ ‘ಸೌತ್ ಇಂಡಿಯಾ ಬ್ಯುಸಿನೆಸ್ ಪ್ರಶಸ್ತಿ’ (ಎಸ್‌ಐಬಿಎ) ಲಭಿಸಿದೆ. ಉದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳಿಗೆ ನೀಡಲಾಗುವ ಈ ಪ್ರಶಸ್ತಿಯನ್ನು ದುಬೈನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು. ಭಾರತದಲ್ಲಿ ಯುಎಇ ರಾಯಭಾರಿಯಾಗಿದ್ದ ಅಹ್ಮದ್ ಅಬ್ದುಲ್ ರೆಹಮಾನ್ ಅಲ್ಪಾ ಅವರು ಆನಂದ ಸಂಕೇಶ್ವರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಉದ್ಯಮ, ಸಂಸ್ಕೃತಿ ಮತ್ತು…

Read More

ಜಿಎಸ್‌ಟಿ 2.0 ಜಾರಿ: ವಾಹನ, ಔಷಧ ಸೇರಿದಂತೆ ಹಲವು ಉತ್ಪನ್ನಗಳ ಬೆಲೆ ಇಳಿಕೆ, ಪ್ರಧಾನಿ ಮೋದಿಯವರಿಂದ ‘ಸ್ವದೇಶಿ’ಗೆ ಕರೆ

ನವದೆಹಲಿ: ಜಿಎಸ್‌ಟಿ 2.0 ಜಾರಿಗೆ ಬರುವ ಒಂದು ದಿನ ಮುಂಚಿತವಾಗಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು, ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳು ಭಾರತದ ಬೆಳವಣಿಗೆಯನ್ನು ವೇಗಗೊಳಿಸಲಿವೆ ಎಂದು ಪ್ರತಿಪಾದಿಸಿದರು. ಜೊತೆಗೆ, ಸಾರ್ವಜನಿಕರು ‘ಸ್ವದೇಶಿ’ (ಭಾರತದಲ್ಲಿ ತಯಾರಿಸಿದ) ಉತ್ಪನ್ನಗಳನ್ನು ಉತ್ತೇಜಿಸಬೇಕು ಎಂದು ಕರೆ ನೀಡಿದರು. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯ ಸರ್ಕಾರಗಳು ಸಹ ತಮ್ಮ ‘ಸ್ವದೇಶಿ’ ಅಭಿಯಾನದಲ್ಲಿ ಭಾಗವಹಿಸಿ, ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡಬೇಕೆಂದು ವಿನಂತಿಸಿದರು. “ನವರಾತ್ರಿಯ…

Read More

ಜಿಎಸ್‌ಟಿ ಸುಧಾರಣೆಗಳು ಮುಂದಿನ ಪೀಳಿಗೆಯ ಆರ್ಥಿಕ ಪ್ರಗತಿಗೆ ವೇಗ: ಪ್ರಧಾನಿ ಮೋದಿ

ನವದೆಹಲಿ: ನಾಳೆಯಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸುಧಾರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥಿಕತೆಗೆ ಉತ್ತೇಜನ ನೀಡುವ “ಮುಂದಿನ ಪೀಳಿಗೆಯ ಸುಧಾರಣೆ” ಎಂದು ಬಣ್ಣಿಸಿದ್ದಾರೆ. ಭಾನುವಾರ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ನಾಳೆಯಿಂದ ನವರಾತ್ರಿ ಮತ್ತು ‘ಜಿಎಸ್‌ಟಿ ಬಚತ್ ಉತ್ಸವ’ ಎಂಬ ಎರಡು ಹಬ್ಬಗಳು ಪ್ರಾರಂಭವಾಗಲಿವೆ ಎಂದು ಅವರು ಘೋಷಿಸಿದರು. “ನವರಾತ್ರಿಯ ಮೊದಲ ದಿನದಿಂದ, ದೇಶವು ಆತ್ಮನಿರ್ಭರ ಭಾರತದತ್ತ ಮತ್ತೊಂದು ಪ್ರಮುಖ ಹೆಜ್ಜೆ ಇಡುತ್ತಿದೆ. ನಾಳೆಯಿಂದ ಸೂರ್ಯೋದಯದೊಂದಿಗೆ, ಮುಂದಿನ ಪೀಳಿಗೆಯ…

Read More

ಇನ್ನೆನೂ ಒಂದು ಘಂಟೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನ ಮಂತ್ರಿ ‌ನರೇಂದ್ರ ಮೋದಿ ಭಾಣಷ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಇಂದು ಸಂಜೆ ಭಾಷಣ ಮಾಡಲಿದ್ದು, ಅವರ ಮಾತುಗಳು ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿವೆ. ನಾಳೆಯಿಂದ ಹೊಸ ಜಿಎಸ್‌ಟಿ 2.0 ನಿಯಮಗಳು ಜಾರಿಗೆ ಬರುತ್ತಿರುವ ಕಾರಣ, ಈ ಭಾಷಣವು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಪ್ರಧಾನಿಯವರು ತಮ್ಮ ಭಾಷಣದಲ್ಲಿ ಜಿಎಸ್‌ಟಿ ದರಗಳಲ್ಲಿನ ಬದಲಾವಣೆಗಳು ಮತ್ತು “ವೋಕಲ್ ಫಾರ್ ಲೋಕಲ್” ಎಂಬ ಪರಿಕಲ್ಪನೆಯ ಕುರಿತು ಪ್ರಮುಖವಾಗಿ ಮಾತನಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇದರ ಜೊತೆಗೆ, ಅಮೆರಿಕದೊಂದಿಗಿನ ಸುಂಕ ವಿವಾದ ಹಾಗೂ H1B ವೀಸಾ…

Read More

ಹೃದಯ ಕರಗಿಸಿದ ಸ್ವಾಭಿಮಾನದ ಕಥೆ: ಚೆನ್ನೈನ ರೈಲಿನಲ್ಲಿ ಕಂಡ ಅದಮ್ಯ ಚೈತನ್ಯ

ಚೈನೈ:ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಡಾ. ಮೌತ್ ಮ್ಯಾಟರ್ಸ್ ಎಂಬುವವರು ಹಂಚಿಕೊಂಡ ಒಂದು ಹೃದಯ ಕರಗಿಸುವ ಕಥೆ, ಓದುಗರ ಕಣ್ಣುಗಳನ್ನು ತೇವಗೊಳಿಸಿದೆ. ಲಂಡನ್‌ನಲ್ಲಿ ನೆಲೆಸಿರುವ ತಮ್ಮ ಸ್ವಂತ ಮಗಳಿಂದ ಕೈಬಿಡಲ್ಪಟ್ಟ ವೃದ್ಧ ತಂದೆಯೊಬ್ಬರ ಸ್ವಾಭಿಮಾನದ ಬದುಕು ಎಲ್ಲರ ಗಮನ ಸೆಳೆದಿದೆ. ಅವರ ವರದಿಯ ಪ್ರಕಾರ, ಚೆನ್ನೈನ ಜನನಿಬಿಡ ರೈಲು ನಿಲ್ದಾಣಗಳಲ್ಲಿ 80 ವರ್ಷದ ವೃದ್ಧರೊಬ್ಬರು ಪುಟ್ಟ ಬುಟ್ಟಿಯೊಂದನ್ನು ಹಿಡಿದು ಸಿಹಿ ತಿಂಡಿಗಳು ಮತ್ತು ಪೋಲಿಗಳನ್ನು ಮಾರುತ್ತಿದ್ದಾರೆ. ತಮ್ಮ 70 ರ ದಶಕದಲ್ಲಿರುವ ಅವರ…

Read More

ಕುಟುಂಬ ರಾಜಕಾರಣ: ಭಾರತದಲ್ಲಿ ಕರ್ನಾಟಕ 04 ನೇ ಸ್ಥಾನ?

ನವದೆಹಲಿ: ಭಾರತೀಯ ರಾಜಕಾರಣದಲ್ಲಿ ಕುಟುಂಬ ರಾಜಕಾರಣ ಎಷ್ಟು ಆಳವಾಗಿ ಬೇರೂರಿದೆ ಎಂಬುವುದಕ್ಕೆ ನೂತನ ವರದಿಯೊಂದು ಸ್ಪಷ್ಟ ಚಿತ್ರಣ ನೀಡಿದೆ. ದೇಶದ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಈ ಹಣೆಬರಹದಿಂದ ಹೊರತಾಗಿಲ್ಲ ಎಂಬುದನ್ನು “ಅಸೋಸಿಯೇಷನ್ ಫಾರ್ ಡೆಮಾಕ್ರೆಟಿಕ್ ರಿಫಾರ್ಮ್ಸ್” (ADR) ಸಂಸ್ಥೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆ. ಪ್ರತಿ ಐವರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರುADR ವರದಿಯ ಪ್ರಕಾರ, ಭಾರತದಲ್ಲಿ ಶೇ. 21ರಷ್ಟು ಸಂಸದರು, ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಕುಟುಂಬ ರಾಜಕಾರಣದ ಹಿನ್ನೆಲೆಯಿಂದ ಬಂದವರು. ಅಂದರೆ, ದೇಶದ ಪ್ರತಿ…

Read More

ಭಾರತದ 15ನೇ ಉಪರಾಷ್ಟ್ರಪತಿಯಾಗಿ ಸಿ.ಪಿ. ರಾಧಾಕೃಷ್ಣನ್ ಅಧಿಕಾರ ಸ್ವೀಕಾರ

ಹೊಸದಿಲ್ಲಿ: ಸಿ.ಪಿ. ರಾಧಾಕೃಷ್ಣನ್ ಅವರು ಶುಕ್ರವಾರ ಭಾರತದ 15ನೇ ಉಪರಾಷ್ಟ್ರಪತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಧಾಕೃಷ್ಣನ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್‌ಕರ್ ಮತ್ತು ಎಂ. ವೆಂಕಯ್ಯ ನಾಯ್ಡು, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಗಣ್ಯರು…

Read More

ಅಮೇರಿಕಾದಲ್ಲಿ ಚಾರ್ಲಿ ಕಿರ್ಕ ಹತ್ಯೆ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ

ವಾಷಿಂಗ್ಟನ್, ಸೆ.11:ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಹಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದ ಬಲಪಂಥೀಯ ಟಾಕ್‌ಶೋ ನಿರೂಪಕ ಮತ್ತು ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (31) ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಘಟನೆ ಸೆಪ್ಟೆಂಬರ್ 10ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ. “ದಿ ಅಮೇರಿಕನ್ ಕಮ್ಯಾಕ್ ಟೂರ್” ಹೆಸರಿನ ತನ್ನ ರಾಷ್ಟ್ರೀಯ ಭಾಷಣ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗಲೇ ಅಕಸ್ಮಾತ್ ದಾಳಿಕೋರ ಗುಂಡು…

Read More