ರಾಜಸ್ಥಾನ:ಭೀಕರ ಅಪಘಾತ: ದೇವಸ್ಥಾನದಿಂದ ಮರಳುತ್ತಿದ್ದ ಭಕ್ತರ ಬಸ್ ಟ್ರೈಲರ್ಗೆ ಡಿಕ್ಕಿ; 18 ಮಂದಿ ದುರ್ಮರಣ
💥 ಭೀಕರ ಅಪಘಾತ: ದೇವಸ್ಥಾನದಿಂದ ಮರಳುತ್ತಿದ್ದ ಭಕ್ತರ ಬಸ್ ಟ್ರೈಲರ್ಗೆ ಡಿಕ್ಕಿ; 18 ಮಂದಿ ದುರ್ಮರಣ ಫಲೋದಿ (ರಾಜಸ್ಥಾನ): ನವೆಂಬರ್ 2 ರಾಜಸ್ಥಾನದ ಫಲೋದಿ ಜಿಲ್ಲೆಯಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 18 ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೇವಸ್ಥಾನಕ್ಕೆ ದರ್ಶನ ಮಾಡಿ ಮರಳುತ್ತಿದ್ದ ಟೆಂಪೋ ಟ್ರಾವೆಲರ್ (ಬಸ್) ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರೈಲರ್ ವಾಹನಕ್ಕೆ ಅಪ್ಪಳಿಸಿದ ಪರಿಣಾಮ ಈ ದುರಂತ ಸಂಭವಿಸಿದೆ. ಮಟೋದ ಬಳಿ…

