ರೈತರಿಗೆ ಅನುಕೂಲ: ಅಣ್ಣಿಗೇರಿಯಲ್ಲಿ ಹೆಸರು, ಉದ್ದು ಮತ್ತು ಹತ್ತಿ ಖರೀದಿ ಕೇಂದ್ರಗಳಿಗೆ ಶಾಸಕ ಎನ್. ಎಚ್. ಕೋನರಡ್ಡಿ ಚಾಲನೆ

Spread the love

ಅಣ್ಣಿಗೇರಿ: ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಕೃಷಿ ಹುಟ್ಟುವಳಿ ಮಾರಾಟ ಸಮಿತಿ (APMC) ಆವರಣದಲ್ಲಿ ಮಂಗಳವಾರದಂದು ಸರ್ಕಾರದ ಬೆಂಬಲ ಬೆಲೆಯಲ್ಲಿ ಹೆಸರು ಮತ್ತು ಉದ್ದು ಬೆಳೆಗಳ ಖರೀದಿ ಕೇಂದ್ರವನ್ನು ಶಾಸಕ ಎನ್. ಎಚ್. ಕೋನರಡ್ಡಿ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೋನರಡ್ಡಿ, ರೈತರಿಗೆ ಈಗಾಗಲೇ ಬೆಳೆ ಪರಿಹಾರವು ಖಾತೆಗಳಿಗೆ ಜಮಾ ಮಾಡುವ ಕಾರ್ಯ ಪ್ರಾರಂಭವಾಗಿದೆ. ರೈತರು ತಾವು ಬೆಳೆದ ಹೆಸರು ಮತ್ತು ಉದ್ದನ್ನು ಸಮರ್ಪಕವಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡುವುದರ ಮೂಲಕ ಇದರ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದರು.

ನಂತರ, ಅವರು ಸಿ.ಸಿ.ಐ. (CCI) ಮೂಲಕ ಅಣ್ಣಿಗೇರಿಯ ಮೂರು ಜಿನ್ನಿಂಗ್ ಕೇಂದ್ರಗಳಲ್ಲಿ ಹತ್ತಿ ಖರೀದಿ ಕೇಂದ್ರಗಳಿಗೂ ಚಾಲನೆ ನೀಡಿದರು. ಈ ಮೂರು ಕೇಂದ್ರಗಳು ಶ್ರೀ ವೀರಭದ್ರೇಶ್ವರ ಜಿನ್ನಿಂಗ್, ಶ್ರೀ ಸಿದ್ಧಿವಿನಾಯಕ ಜಿನ್ನಿಂಗ್ ಹಾಗೂ ವಿ. ಎಸ್. ಹುಬ್ಬಳ್ಳಿ ಜಿನ್ನಿಂಗ್ ಆಗಿವೆ. ಈ ಹಿಂದೆ ರಾಜ್ಯದಲ್ಲಿಯೇ ಅತಿ ಹೆಚ್ಚು ಹತ್ತಿ ಖರೀದಿ ಮಾಡಿದ್ದು ಅಣ್ಣಿಗೇರಿಯ ಸಿ.ಸಿ.ಐ. ವತಿಯಿಂದಲೇ ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರವಾಗಿದೆ ಎಂದು ಶಾಸಕರು ಸ್ಮರಿಸಿದರು.

ಈ ಸಂದರ್ಭದಲ್ಲಿ ಸಿ.ಸಿ.ಐ. ಅಧಿಕಾರಿ ಜಿ. ರಮೇಶ, ಟಿ.ಎ.ಪಿ.ಎಸ್.ಎಂ.ಸಿ. ಅಧ್ಯಕ್ಷ ಬಸನಗೌಡ್ರು ಕುರಹಟ್ಟಿ, ಎ.ಪಿ.ಎಂ.ಸಿ. ಕಾರ್ಯದರ್ಶಿ ಎ. ಎಂ. ಮುಲ್ಲಾ, ಮಾಜಿ ಕ್ರೆಡಲ್ ಅಧ್ಯಕ್ಷ ಷಣ್ಮುಖ ಗುರಿಕಾರ, ನವಲಗುಂದ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸೋಮಣ್ಣ ಬಳಿಗೇರ, ಅಣ್ಣಿಗೇರಿ ತಾಲೂಕು ಅಧ್ಯಕ್ಷ ಅಮೃತಪ್ಪ ಗುರಿಕಾರ, ಚಂಬಣ್ಣ ಹಾಳದೋಟರ, ಪುರಸಭೆ ಸದಸ್ಯ ಹಸನಸಾಬ ಸುಂಕದ, ರೆಹಮಾನಸಾಬ ಹೊರಗಿನಮನಿ, ಮಾಜಿ ಪುರಸಭೆ ಅಧ್ಯಕ್ಷ ಬೂಪಾಲ ಪುಟ್ಟಣ್ಣವರ, ರಮೇಶ ಕರೆಟ್ಟನವರ, ಪ್ರಕಾಶ ಬಳ್ಳೂಳ್ಳಿ, ದಾವಲಸಾಬ ದರವಾನ, ಶ್ರೀಕಾಂತ ಕೋಳಿವಾಡ, ಖಾದರಸಾಬ ಮುಳಗುಂದ, ಹನಮಂತ ಕಂಬಳಿ, ಮಹೇಶ ಅಂಗಡಿ, ಮಹೇಶ ಸುರಕೋಡ, ಭಗವಂತಪ್ಪ ಪುಟ್ಟಣ್ಣವರ, ಗುರುಸಿದ್ದಪ್ಪ ಕೊಪ್ಪದ, ಅರ್ಜುನ ಕಲಾಲ, ಸುರೇಶ ಸುಣಗಾರ, ಹಸನಸಾಬ ಗಡ್ಡದ, ವಿನಾಯಕ ನಲವಡಿ, ಮಾರುತಿ ಕಾಳಿ, ಖಾದರಸಾಬ ಮುಳಗುಂದ, ವೀರನಾರಾಯಣ ಬೆಂತೂರ, ಶ್ರೀನಿವಾಸ ಬೂದಿಹಾಳ, ಲಕ್ಷ್ಮಣ ಬೆಂತೂರ, ಮಾರುತಿ ಮರಡ್ಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *