ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಚಿತ್ರಭಾನುಕೋಟೆ ಗವಿಮಠ: ಸರ್ವಧರ್ಮ ಸಮನ್ವಯದ ಪವಿತ್ರ ತಾಣದಲ್ಲಿ ದಿಂಡಿ ಉತ್ಸವಕ್ಕೆ ಅದ್ಧೂರಿ ಸ್ವಾಗತ

Spread the love

ಮುಧೋಳ: ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಳಗವಾಡಿಯಿಂದ ಪಂಢರಪುರದತ್ತ ಪಾದಯಾತ್ರೆ ಕೈಗೊಂಡಿದ್ದ ಭಕ್ತರ ದಿಂಡಿಗೆ ಮುಧೋಳದ ಚಿತ್ರಭಾನುಕೋಟೆ ಗವಿಮಠದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಭಕ್ತಿ, ಭಾವೈಕ್ಯತೆ ಮತ್ತು ಸಹಬಾಳ್ವೆಯ ಸಂದೇಶ ಸಾರುವ ಈ ಮಠವು ಎಲ್ಲ ಧರ್ಮಗಳ ಸಮನ್ವಯದ ಜೀವಂತ ಪ್ರತೀಕವಾಗಿ ಹೊರಹೊಮ್ಮಿದೆ.

ಭಾವೈಕ್ಯತೆಯ ಕೇಂದ್ರ: ಸಜೀವ ವೃಂದಾವನ & ಗದ್ದುಗೆ
ಈ ಮಠದ ವಿಶೇಷವೆಂದರೆ, ಆವರಣದಲ್ಲಿ ಒಂದೆಡೆ ಶ್ರೀ ಗುರು ಬಾಲಭುಜಂಗ ಸ್ವಾಮಿಗಳವರ ಪವಿತ್ರ ಗದ್ದುಗೆಯಿದ್ದರೆ, ಮತ್ತೊಂದೆಡೆ ಅಜಮೀರ ಸಾಹೇಬರ ಸಜೀವ ವೃಂದಾವನವಿದೆ. ಈ ಸಹಅಸ್ತಿತ್ವವೇ ಹಿಂದೂ–ಮುಸ್ಲಿಂ ಭಾವೈಕ್ಯತೆಯ ಸ್ಪಷ್ಟ ಪ್ರತೀಕವಾಗಿದೆ. ಇಲ್ಲಿ ಉರುಸ್ ಹಾಗೂ ಪೂಜಾ ಮಹೋತ್ಸವಗಳು ಸಮಾನ ಭಾವದಿಂದ ಆಚರಿಸಲ್ಪಡುತ್ತವೆ. ಮುಸ್ಲಿಮರು ಉರುಸ್ ಸಂಭ್ರಮದಲ್ಲಿ ಭಾಗವಹಿಸಿದರೆ, ಹಿಂದೂ ಭಕ್ತರು ಪೂಜೆ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗುತ್ತಾರೆ. “ಧಾರ್ಮಿಕ ನಂಬಿಕೆಗಳ ಅಂತರದಲ್ಲಿಯೂ ಸಹಭಾವನೆ, ಗೌರವ ಮತ್ತು ಮಾನವೀಯತೆಯೇ ಮಠದ ಮೂಲ ಮಂತ್ರವಾಗಿದೆ” ಎಂದು ರಾಮಚಂದ್ರ ನಾಯಕ ತಿಳಿಸಿದರು.

ಪಂಢರಪುರ ಪಾದಯಾತ್ರೆಗೆ ನೆರವು:
ಅಳಗವಾಡಿಯಿಂದ ಆಗಮಿಸಿದ ದಿಂಡಿ ಪಾದಯಾತ್ರಿಕರಿಗೆ ಮಠದ ಸಂತಮಂಡಳದ ವತಿಯಿಂದ ಅಣ್ಣಸಂತರ್ಪಣೆ, ನೀರಿನ ವ್ಯವಸ್ಥೆ ಹಾಗೂ ಸೂಕ್ತ ವಿಶ್ರಾಂತಿ ಸೌಲಭ್ಯಗಳನ್ನು ಒದಗಿಸಲಾಯಿತು. ಭಕ್ತರ ದಿಂಡಿಯು ಭಜನೆ–ಕೀರ್ತನೆಗಳ ನಡುವೆ ಪಂಢರಪುರದತ್ತ ತಮ್ಮ ಪಾದಯಾತ್ರೆಯನ್ನು ಮುಂದುವರಿಸಿತು.

ಗುರು–ಶಿಷ್ಯ ಪರಂಪರೆಯ ಪವಿತ್ರ ತಾಣ
ಮಠವು ಗುರು–ಶಿಷ್ಯ ಆತ್ಮೀಯತೆಯ ಭಾವವನ್ನು ಪ್ರತಿನಿಧಿಸುವ ಪವಿತ್ರ ಸ್ಥಳವಾಗಿದೆ. ಇಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಜೊತೆಗೆ ಸಾಮಾಜಿಕ ಏಕತೆಗೂ ವಿಶೇಷ ಪ್ರಾಮುಖ್ಯತೆ ನೀಡಲಾಗುತ್ತದೆ. ಹಿಂದೂ–ಮುಸ್ಲಿಂ ಭಾವೈಕ್ಯತೆಯ ಅತ್ಯುತ್ತಮ ಮಾದರಿಯಾಗಿ ಚಿತ್ರಭಾನುಕೋಟೆಯ ಗವಿಮಠ ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ.
— ಹ. ಬ. ಪ. ರಾಮಕೃಷ್ಣ ಹಂಬರ, ಪಾದಯಾತ್ರಿ

ಈ ಸಂದರ್ಭದಲ್ಲಿ ಅಬ್ದುಲಸಾಬ ದಂಡಿನ, ಲೋಕಣ್ಣಾ ತಳವಾರ, ಮಹೇಶ ಚಿಪ್ಪಳಕಟ್ಟಿ, ನಿಂಗಪ್ಪ ಕೊಣ್ಣೂರ, ಹನುಮಂತ ಅರಳಿಕಟ್ಟಿ, ಹನುಮಪ್ಪ ನಾಯಕ, ಪರಶುರಾಮ ಮುದ್ದಪೂರ, ರಾಮಪ್ಪ ನಾಯಕ, ಗೋಪಾಲ ನಾಯಕ, ಶಿವಲಿಂಗಪ್ಪ ಚಿಪ್ಪಳಕಟ್ಟಿ, ರಂಗನಗೌಡ ಪಾಟೀಲ, ಆಡಿವಯ್ಯ ಹಿರೇಮಠ, ಹೊಳಬಸು ಅರಳಿಕಟ್ಟಿ, ಸತ್ಯಪ್ಪ ಚಿಪ್ಪಳಕಟ್ಟಿ, ಮಂಜು ಮೊರೆ, ಲಕ್ಷ್ಮಣ ನಾಯಕ, ಭೀಮಪ್ಪ ಕರಿಗಾರ, ವಿ.ಎಸ್. ತುಂಗಳ, ಕಲ್ಲಪ್ಪ ಬೆಳವಣಕಿ, ಗೋಪಾಲ ಅಣ್ಣಿಗೇರಿ, ಬಸವರಾಜ ಹಿರೇಹಾಳ, ಮಲ್ಲಪ್ಪ ರೆಡ್ಡೆರ, ಶಿವಪುತ್ರಪ್ಪ ಕವಳಿಕಾಯಿ, ಮೌನೇಶ ಬಡಿಗೇರ, ಸುರೇಶ್ ರಾವುತ್, ಶಿವಪ್ಪ ಶಿವಬಸನ್ನರ, ಕೃಷ್ಣಾ ಬೋಸ್ಲೆ, ಮಂಜುನಾಥ ಗೊಂಡಳೆ, ಸಂಗಮೇಶ ತಟ್ಟಿ, ಅಶೋಕ್ ಮಾಜಿಗನೂರು, ಬಸವರಾಜ ಹದ್ಲಿ, ಶಿವಪ್ಪ ಗುಡಿಸಾಗರ, ಶೇಖಪ್ಪ ಹೊರಕೇರಿ, ಶಿವಪುತ್ರಪ್ಪ ಕುರಿಯವರ, ಸಂತೋಷ ಹಂಬರ, ರಾಮಕೃಷ್ಣ ಹಂಬರ, ಮಾರುತಿ ಯಾಡ್ರಾವಿ, ಶ್ರೀನಿವಾಸ್ ಕಲಾದಗಿ, ಚನ್ನಪ್ಪ ಕೊಣೂರು, ದುರ್ಗಪ್ಪ ಮಾದರ, ಶ್ರೀಕಾಂತ ತಟ್ಟಿ, ಯಲ್ಲಪ್ಪ ಮುತ್ತಗಿ, ಮಹದೇವಪ್ಪ ಗಾಣಿಗೇರ, ಪುಂಡಲಿಂಗಪ್ಪ ಜಾಲಕಣ್ಣವರ, ಹಣಮಪ್ಪ ಶಿರಕೋಳ, ನಾಗಪ್ಪ ಹಡಪದ, ಗದಿಗೆಪ್ಪ ಗೊಬ್ಬರಗುಂಪಿ, ಗಿರಿಯಪ್ಪ ಹೆಗ್ಗಣ್ಣವರ, ಮಾರುತಿ ಕಡ್ಲಿಕೊಪ್ಪ, ಪಾಂಡು ಪೂಜಾರ, ಬಸವರಾಜ ಶಿವಬಸಣ್ಣವರ್, ವೆಂಕಪ್ಪ ಕರಿಗಾರ ಹಾಗೂ ಯಲ್ಲಪ್ಪ ಪೊಲೀಶಿ ಸೇರಿದಂತೆ ಹಲವಾರು ಭಕ್ತರು ಹಾಜರಿದ್ದರ

Leave a Reply

Your email address will not be published. Required fields are marked *