ವಿಶ್ವ ಪಾರ್ಶ್ವವಾಯು ದಿನ: ಹುಬ್ಬಳ್ಳಿಯಲ್ಲಿ ನಾಳೆ ಜನಜಾಗೃತಿ ವಾಕಾಥಾನ್; ಶಾಸಕ ಮಹೇಶ್ ಟೆಂಗಿನಕಾಯಿ ಅವರಿಂದ ಚಾಲನೆ, ನೂರಾರು ವಿದ್ಯಾರ್ಥಿಗಳ ಭಾಗಿ

Spread the love

ಹುಬ್ಬಳ್ಳಿ: ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ಬಾಲಾಜಿ ಆಸ್ಪತ್ರೆಯ ವತಿಯಿಂದ ಅಕ್ಟೋಬರ್ 29ರಂದು (ನಾಳೆ) ನಗರದಲ್ಲಿ ಜನಜಾಗೃತಿ ವಾಕಾಥಾನ್ ಹಮ್ಮಿಕೊಳ್ಳಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಬಾಲಾಜಿ ಆಸ್ಪತ್ರೆ ಆವರಣದಿಂದ ಹೊರಡಲಿರುವ ಈ ಜಾಥಾಕ್ಕೆ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರು ಚಾಲನೆ ನೀಡಲಿದ್ದಾರೆ. ಆಸ್ಪತ್ರೆಯ ಚೇರ್ಮನ್ ಡಾ. ಕ್ರಾಂತಿಕಿರಣ್ ಅವರು ವಾಕಾಥಾನ್‌ನ ನೇತೃತ್ವ ವಹಿಸಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ.

ವಾಕಾಥಾನ್ ಆಸ್ಪತ್ರೆಯಿಂದ ಆರಂಭಗೊಂಡು, ಕೋರ್ಟ್ ಮುಂಭಾಗದ ರಸ್ತೆ, ಶಿರೂರ ಪಾರ್ಕ್, ಆರ್ಟ್ ಕಾಲೇಜು, ಕೆಎಂಸಿ, ಎಂ.ವಿ.ಪಿ ಎದುರಿನ ವಿದ್ಯಾನಗರ, ತಿಮ್ಮಸಾಗರ ರಸ್ತೆ ಮುಖಾಂತರ ಸಾಗಿ ಪುನಃ ಆಸ್ಪತ್ರೆ ಆವರಣದಲ್ಲಿ ಸಮಾಪ್ತಿಗೊಳ್ಳಲಿದೆ. ಈ ಜನಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳಿಂದ ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸಾರ್ವಜನಿಕರಿಗೂ ಪಾಲ್ಗೊಳ್ಳಲು ಮುಕ್ತ ಅವಕಾಶವಿದೆ.

ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಸ್ಪತ್ರೆಯ ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *