ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಣೆ: ಶಾಸಕ ಮಹೇಶ ತೆಂಗಿನಕಾಯಿ

Spread the love

ಹುಬ್ಬಳ್ಳಿ: ಹು-ಧಾ ಕೇಂದ್ರ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಅವರು ಇಲ್ಲಿನ ಬಸವೇಶ್ವರ ನಗರದ ತಮ್ಮ ಗೃಹ ಕಚೇರಿಯಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.
ಧಾರವಾಡದ ಯಮನವ್ವ ಫಕೀರಪ್ಪ ಇಟಗಿ, ಮತ್ತು ವಜೇಶ್ವರಿ ಊಟವಾಲೆ ಅವರಿಗೆ ವಾಹನಗಳನ್ನು ಹಸ್ತಾಂತರಿಸಲಾಯಿತು.

ಈ ವಾಹನ ವಿತರಿಸಿ ಮಾತನಾಡಿದ ಶಾಸಕರು, ಅಂಗವಿಕಲರು ದೇಶದ ವಿವಿಧೆಡೆ ಅನೇಕ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸಿಸಿದರು. ಅಲ್ಲದೆ, ವಿತರಿಸಿದ ತ್ರಿಚಕ್ರ ವಾಹನಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಜಣ್ಣ ಕೊರವಿ, ಪಾಲಿಕೆ ಸದಸ್ಯ ಉಮೇಶಗೌಡ ಕೌಜಗೇರಿ, ಮುಖಂಡರಾದ ಸಿದ್ದು ಮೋಗಲಿಶೆಟ್ಟರ, ರವಿ ನಾಯಕ, ರಘು ಧಾರವಾಡಕರ, ಸುದರ್ಶನ ದಿಹಳ್ಳಿ, ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಪ್ರಸನ್ನ ಕಪಟಕರ, ರಾಮನಗೌಡ ಶೆಟ್ಟನಗೌಡ್ರ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *