ರೈತರಿಗೆ ಪರಿಹಾರ ನೀಡದ ಜಿಲ್ಲಾಡಳಿತಕ್ಕೆ ‘ಜಪ್ತಿ’ ಶಾಕ್: ಕಲಬುರಗಿ ಜಿಲ್ಲಾಧಿಕಾರಿ ಕಾರು ವಶಕ್ಕೆ!
ಕಲಬುರಗಿ: ಭೂಸ್ವಾಧೀನದ ಪರಿಹಾರ ಹಣ ನೀಡುವಲ್ಲಿ ದಶಕಗಳ ಕಾಲ ವಿಳಂಬ ಧೋರಣೆ ಅನುಸರಿಸಿದ ಕಲಬುರಗಿ ಜಿಲ್ಲಾಡಳಿತಕ್ಕೆ ನ್ಯಾಯಾಲಯವು ಭಾರಿ ಎಚ್ಚರಿಕೆ ನೀಡಿದೆ. ರೈತರ ಹಿತರಕ್ಷಣೆಗಾಗಿ ಕಠಿಣ ನಿಲುವು ತಳೆದಿರುವ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯವು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ಅಧಿಕೃತ ಸರ್ಕಾರಿ ಕಾರನ್ನು ಜಪ್ತಿ ಮಾಡಲು ಆದೇಶಿಸುವ ಮೂಲಕ ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ವಿವಾದದ ಹಿನ್ನೆಲೆ ಸುಮಾರು ಎರಡು ದಶಕಗಳಷ್ಟು ಹಳೆಯದಾಗಿದೆ. 2005ರಲ್ಲಿ ಕಲಬುರಗಿ ನಗರದ ಹೊರವಲಯದ ನಂದಿಕೂರ ಗ್ರಾಮದ ಬಳಿ…

