ಮಹಿಳೆಯರನ್ನು ಗೌರವಿಸುವ ಸಮಾಜದಲ್ಲಿ ನೆಮ್ಮದಿ ಸಾಧ್ಯ: ಆರ್.ಸಿ. ಪಾಟೀಲ್
ರಾಣೇಬೆನ್ನೂರ: ಎಲ್ಲಿ ಮಹಿಳೆಯರನ್ನು ಪೂಜ್ಯನೀಯ ಸ್ಥಾನದಲ್ಲಿ ಕಾಣುತ್ತಾರೋ, ಅಲ್ಲಿ ಸುಸಂಸ್ಕೃತ ಹಾಗೂ ನೆಮ್ಮದಿಯ ವಾತಾವರಣ ಇರುತ್ತದೆ. ಪ್ರತಿಯೊಬ್ಬರೂ ಮಹಿಳೆಯರನ್ನು ಪೂಜಿಸುವ ಮತ್ತು ಗೌರವಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಮಾತ್ರ ಅವರಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ ಎಂದು ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಆರ್.ಸಿ. ಪಾಟೀಲ್ ಹೇಳಿದರು. ನಗರದ ಹೊರವಲಯದ ಮಾಗೋಡ ರಸ್ತೆಯಲ್ಲಿರುವ ಸಾರಿಗೆ ಘಟಕದಲ್ಲಿ ಭಾನುವಾರ ಆಯೋಜಿಸಲಾಗಿದ್ದ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ” ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಹೆಣ್ಣನ್ನು ಅಬಲೆಯೆಂದು ಹಿಯಾಳಿಸಬಾರದು. ಜನ್ಮ ನೀಡಿದ ತಾಯಿಯಿಂದ ಹಿಡಿದು ರವಿವಾರದಂದು…

