ತಹಶೀಲ್ದಾರ್ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಯ ಎಚ್ಚರಿಕೆ: ಭದ್ರಾವತಿ ಕಂದಾಯ ಇಲಾಖೆಯಲ್ಲಿ ಸಂಚಲನ ಮೂಡಿಸಿದ ಪತ್ರ ವೈರಲ್
ಭದ್ರಾವತಿ: ತಾಲೂಕಿನ ತಹಶೀಲ್ದಾರ್ ಅವರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ನೌಕರರೊಬ್ಬರು, ತಮಗೆ ಏನಾದರೂ ತೊಂದರೆಯಾದರೆ ತಹಶೀಲ್ದಾರ್ ಅವರೇ ನೇರ ಹೊಣೆ ಎಂದು ಬರೆದಿರುವ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಚನ್ನಗಿರಿ ತಾಲೂಕಿನ ಅಟ್ಟಿಹಳ್ಳಿ ನಿವಾಸಿ ಆರ್.ಜಿ. ಅಭಿಷೇಕ್ ಎಂಬುವವರು ಭದ್ರಾವತಿ ತಹಶೀಲ್ದಾರ್ ಪರಸಪ್ಪ ಕುರುಬರ ಅವರ ವಿರುದ್ಧ ಈ ಗಂಭೀರ ಆರೋಪ ಮಾಡಿದ್ದು, ತಹಶೀಲ್ದಾರ್ ಅವರ ಅತಿಯಾದ ಒತ್ತಡದಿಂದಾಗಿ ತಾವು ಸಿದ್ದಾಪುರ ಚಾನಲ್‌ಗೆ ಹಾರಿ ಆತ್ಮಹತ್ಯೆ…

