ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ: ಕುರಿಗಾಹಿ ಸೇರಿ 45 ಕುರಿಗಳು ಸಜೀವ ದಹನ

ಬೀದರ್: ಜಿಲ್ಲೆಯ ಔರಾದ್ ತಾಲ್ಲೂಕಿನ ಬೋರಾಳ ಗ್ರಾಮದ ಗೌತಮ ನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ಅನಾಹುತದಲ್ಲಿ ಕುರಿಗಾಹಿಯೊಬ್ಬರು ಹಾಗೂ 45 ಕುರಿಗಳು ಬೆಂಕಿಗಾಹುತಿಯಾಗಿರುವ ಮನಕಲಕುವ ಘಟನೆ ನಡೆದಿದೆ. ​ಬೋರಾಳ ಗ್ರಾಮದ ಶಂಕರ್ ಈರಪ್ಪ ಮೇತ್ರೆ (65) ಮೃತಪಟ್ಟ ದುರ್ದೈವಿ ಕುರಿಗಾಹಿ. ಮಂಗಳವಾರ ರಾತ್ರಿ ವೇಳೆ ಕುರಿಗಳ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಹೊರಗೆ ಮಲಗಿದ್ದ ಶಂಕರ್ ಅವರು ಒಳಗೆ ಏನಾಗುತ್ತಿದೆ ಎಂದು ನೋಡಲು ಹೋದಾಗ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ್ದಾರೆ. ಶರೀರದ ಶೇ….

Read More

​ಬೀದರ್: ಕಾರಂಜಾ ಡ್ಯಾಂ ಕಾಲುವೆಗೆ ಬಿದ್ದು ತಂದೆ-ಮಗ ಸಾವು

ಭಾಲ್ಕಿ: ಆಕಸ್ಮಿಕವಾಗಿ ಕಾಲುವೆಗೆ ಬಿದ್ದು ತಂದೆ ಮತ್ತು ಮಗ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಹಳ್ಳಿಖೇಡ್ (ಬಿ) ಗ್ರಾಮದ ನಿವಾಸಿಗಳಾದ ವಿಶ್ವನಾಥ (50) ಹಾಗೂ ಅವರ ಪುತ್ರ ಅಮರೇಶ (23) ಮೃತಪಟ್ಟ ದುರ್ದೈವಿಗಳು. ​ಕಾರಂಜಾ ಜಲಾಶಯದ ಕಾಲುವೆ ಪಕ್ಕದಲ್ಲಿ ಸಂಚರಿಸುತ್ತಿದ್ದಾಗ ಈ ಆಕಸ್ಮಿಕ ನಡೆದಿದೆ ಎಂದು ತಿಳಿದುಬಂದಿದೆ. ಕಾಲುವೆಗೆ ಬಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದರಾದರೂ, ನೀರಿನ ಸೆಳೆತ ಹೆಚ್ಚಿದ್ದರಿಂದ ಇಬ್ಬರೂ ಮೃತಪಟ್ಟಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ…

Read More