ಶಿರಸಿ | ಬೆಣ್ಣೆಹೊಳೆ ಜಲಪಾತದಲ್ಲಿ ದುರ್ಘಟನೆ ಒಬ್ಬ ವಿಧ್ಯಾರ್ಥಿ ನೀರು ಪಾಲು ; ಮತ್ತೊಬ್ಬನ ರಕ್ಷಣೆ*

Spread the love

ಉತ್ತರ ಕನ್ನಡ ಜಿಲ್ಲೆಯ: ಶಿರಸಿ ತಾಲ್ಲೂಕಿನ ಬೆಣ್ಣೆಹೊಳೆ ಜಲಪಾತದ ಬಳಿ ದುರ್ಘಟನೆ ಸಂಭವಿಸಿದೆ. ಪ್ರವಾಸಕ್ಕೆ ಅಂತ ಬಂದಿದ್ದ ವಿದ್ಯಾರ್ಥಿಗಳು ಕಾಲು ಜಾರಿ ಜಲಪಾತದಲ್ಲಿ ಕೊಚ್ಚಿ ಹೋದ ದುರ್ಘಟನೆ ಸಂಭವಿಸಿದೆ. ಇದರಲ್ಲಿ ಒಬ್ಬ ವಿಧ್ಯಾರ್ಥಿ ಕಲ್ಲು ಬಂಡೆಗಳ ನಡುವೆ ಸಿಲುಕಿ ಕೊಂಡಿದ್ದು ಅವನನ್ನು ಅಗ್ನಿಶಾಮಕ ದಳದವರು ರಕ್ಷಿಸಿದ್ದಾರೆ. ಮತ್ತೊಬ್ಬ ವಿಧ್ಯಾರ್ಥಿ ಕೊಚ್ಚಿ ಹೋಗಿದ್ದು ಅಗ್ನಿಶಾಮಕ ದಳ ಹಾಗೂ ಪೋಲಿಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.

ಹೊಸಪೇಟೆ ಮೂಲದ ಶ್ರೀನಿವಾಸ ರಕ್ಷಿಸಲ್ಪಟ್ಟ ವಿದ್ಯಾರ್ಥಿಯಾಗಿದ್ದು, ಹೂವಿನಹಡಗಲಿ ಮೂಲದ ರಾಹುಲ್ ಕಾಣೆಯಾದ ವಿಧ್ಯಾರ್ಥಿಯಾಗಿದ್ದಾನೆ. ಶಿರಸಿಯ ಫಾರೆಸ್ಟ್ (ಅರಣ್ಯ) ಕಾಲೇಜಿನ ನಾಲ್ವರು ವಿದ್ಯಾರ್ಥಿಗಳ ತಂಡ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಜಲಪಾತದಲ್ಲಿ ಸ್ನಾನ ಮಾಡಿ ಬಟ್ಟೆ ಹಾಕಿಕೊಳ್ಳುವಾಗ ಶ್ರೀನಿವಾಸ್ ಕಾಲುಜಾರಿ ಬಿದ್ದಿದ್ದರಿಂದ, ಆತನನ್ನು ರಕ್ಷಿಸಲು ಧಾವಿಸಿದ ಮತ್ತೊಬ್ಬ ವಿಧ್ಯಾರ್ಥಿ ರಾಹುಲ್ ಇಬ್ಬರೂ ಆಯಾತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.‌

ಅಗ್ನಿಶಾಮಕ ದಳ ಮತ್ತು ಶಿರಸಿ ಗ್ರಾಮೀಣ ಠಾಣೆ ಪೊಲೀಸರು ನಡೆಸಿದ ಶೋಧದಲ್ಲಿ ಶ್ರೀನಿವಾಸ್ ಕಲ್ಲಿನೊಳಗೆ ಸಿಲುಕಿರುವುದನ್ನು ಪತ್ತೆಹಚ್ಚಿ ರಕ್ಷಣೆ ಮಾಡಲಾಯಿತು. ಆದರೆ ಅವನ ಬೆನ್ನು ಮೂಳೆ ಮುರಿದಿದರಿಂದ ಅವನನ್ನು ತಕ್ಷಣ ಶಿರಸಿ ಪಂಡಿತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೆ ಕಾಣೆಯಾದ ಮತ್ತೊಬ್ಬ ವಿಧ್ಯಾರ್ಥಿ ರಾಹುಲ ಇನ್ನೂ ಪತ್ತೆಯಾಗಿಲ್ಲ.

ಬೆಣ್ಣೆಹೊಳೆ ಜಲಪಾತ ದಟ್ಟ ಕಾಡಿನ ಮಧ್ಯದಲ್ಲಿ ಇರುವುದರಿಂದ ದೃಶ್ಯ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಮಳೆಗಾಲದಲ್ಲಿ ಇಲ್ಲಿ ಅಪಾಯ ಹೆಚ್ಚು. ಅರಣ್ಯ ಇಲಾಖೆ ಈಗಾಗಲೇ ಪ್ರವೇಶ ನಿಷೇಧ ಹೇರಿದ್ದರೂ, ವಾರಾಂತ್ಯದಲ್ಲಿ ಪ್ರವಾಸಿಗರು ನಿರ್ಲಕ್ಷ್ಯದಿಂದ ಹೋಗುತ್ತಿರುವುದರಿಂದ ಅಪಘಾತಗಳು ನಡೆಯುತ್ತಿವೆ. ಈ ಕುರಿತು ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *