ಚಾಮರಾಜನಗರದಲ್ಲಿ ಕೈವಾರ ತಾತಯ್ಯನವರ ವಿಚಾರ ಸಂಕಿರಣ ಹಾಗೂ ‘ಯತೀಂದ್ರ ಶ್ರೀ’ ಪ್ರಶಸ್ತಿ ಪ್ರದಾನ: ಭಾಗವಹಿಸಲು ಗೋಪಾಲಕೃಷ್ಣ ಕರೆ

Spread the love

ಹನೂರು: ಸನಾತನ ಧರ್ಮದ ಶ್ರೇಷ್ಠ ಗುರುಗಳಾದ ಶ್ರೀ ಕೈವಾರ ಸದ್ಗುರು ಯೋಗಿನಾರೇಯಣ ಯೋಗಿಗಳ ಪರಿಚಯ, ಆತ್ಮಬೋಧೆ ಕುರಿತ ವಿಚಾರ ಸಂಕಿರಣ ಹಾಗೂ ‘ಯತೀಂದ್ರ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹನೂರು ತಾಲೂಕಿನ ಎಲ್ಲಾ ಸಮುದಾಯದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಹನೂರು ತಾಲೂಕು ಬಣಜಿಗ/ಬಲಿಜ ಸಂಘದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಮನವಿ ಮಾಡಿದ್ದಾರೆ.

​ಈ ಕುರಿತು ಮಾಹಿತಿ ನೀಡಿದ ಅವರು, ಇದೇ ಮಾರ್ಚ್ 22, 2026ರ ಭಾನುವಾರ ಬೆಳಿಗ್ಗೆ 8:30 ಗಂಟೆಗೆ ಚಾಮರಾಜನಗರ ಜಿಲ್ಲಾ ಕೇಂದ್ರದ ವರನಟ ಡಾ. ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಈ ಭವ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಮೈಸೂರಿನ ಶ್ರೀ ಯೋಗಿನಾರೇಯಣ ಯತೀಂದ್ರರ ಪ್ರಚಾರ ಸಭಾ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿರುವ ಈ ಸಮಾರಂಭವು ಆಧ್ಯಾತ್ಮಿಕ ಚಿಂತನೆ ಹಾಗೂ ಸಾಧಕರ ಗೌರವಕ್ಕೆ ಸಾಕ್ಷಿಯಾಗಲಿದೆ ಎಂದು ತಿಳಿಸಿದರು.

​ಕೈವಾರ ತಾತಯ್ಯನವರ ತತ್ವಗಳು ಮತ್ತು ಆತ್ಮಬೋಧೆಯು ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಚಾರ ಸಂಕಿರಣವು ಜ್ಞಾನದೀವಿಗೆಯಾಗಲಿದೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ‘ಯತೀಂದ್ರ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಜಿಲ್ಲೆಯಾದ್ಯಂತ ಇರುವ ಭಕ್ತಾದಿಗಳು ಹಾಗೂ ಹನೂರು ತಾಲೂಕಿನ ಎಲ್ಲಾ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.

ವರದಿ: ಬಂಗಾರಪ್ಪ ಸಿ., ಹನೂರು

Leave a Reply

Your email address will not be published. Required fields are marked *