ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ

Spread the love

ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ “ಹರ್ ಘರ್ ತಿರಂಗ” ಬೈಕ್ ರ‍್ಯಾಲಿ: ಸ್ವಾತಂತ್ರ್ಯೋತ್ಸವ ವಿಜಯೋತ್ಸವಕ್ಕೆ ಸಿದ್ಧತೆ

ಧಾರವಾಡ: ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು.
ಸಂಶಿ ಗ್ರಾಮದ ನಿವೃತ್ತ ಯೋಧ ಜಗದೀಶ ತಮ್ಮನ್ನವರ ಅವರು ರ‍್ಯಾಲಿಗೆ ಚಾಲನೆ ನೀಡಿದರು.
ಗಣ್ಯರಿಗೆ ಗೌರವ ಸಮರ್ಪಣೆ ಮಾಡುವ ಮೂಲಕ ಮೊದಲಿಗೆ
ಸಂಶಿ ಗ್ರಾಮದ ಜಗದ್ಗುರು ಫಕೀರೇಶ್ವರ ಮಠದಿಂದ ಹೊರಟ ಬೈಕ್ ರ‍್ಯಾಲಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರು ಚೆನ್ನಮ್ಮ ಅವರ ಪ್ರತಿಮೆ ಮತ್ತು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿತು. ನಂತರ ಗ್ರಾಮದ ಅಂಬೇಡ್ಕರ್ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಲಾಯಿತು.
ದೇಶಭಕ್ತಿಯ ಘೋಷಣೆಗಳೊಂದಿಗೆ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿದ ರ‍್ಯಾಲಿ, ಸ್ವಾತಂತ್ರ್ಯ ವಿಜಯೋತ್ಸವದ ಸಂದೇಶವನ್ನು ಹರಡಿತು. ಬಳಿಕ ಕಮಡೊಳ್ಳಿ ಗ್ರಾಮವನ್ನು ಪ್ರವೇಶಿಸಿ, ಗ್ರಾಮದ ಮುಖ್ಯ ಬೀದಿಗಳಲ್ಲಿ ಸಾಗಿ ಅಲ್ಲಿನ ಲೋಚನೇಶ್ವರ ಮಠದ ಆವರಣದಲ್ಲಿ ಸಮಾರೋಪಗೊಂಡಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಂದಗೋಳ ಮಂಡಲ ಅಧ್ಯಕ್ಷ ನಾಗನಗೌಡ ಸಾತ್ಮಾರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಆರ್. ಪಾಟೀಲ್ ಅವರ ಸಹೋದರ ಬಾಪೂಗೌಡ ಪಾಟೀಲ್ ಹಾಗೂ ಪಕ್ಷದ ಮುಖಂಡರಾದ ಡಿ.ವೈ. ಲಕ್ಕನಗೌಡ್ರ, ಪ್ರಕಾಶ್ ಕೂಬಿಹಾಳ, ನಾಗನಗೌಡ ಪಾಟೀಲ್, ಪ್ರಕಾಶಗೌಡ ಪಾಟೀಲ, ಮಾಲತೇಶ ಶ್ಯಾಗೋಟಿ, ರವಿಗೌಡ ಪಾಟೀಲ, ಬಸವರಾಜ ನಾವಳ್ಳಿ, ಬಸವರಾಜ ದೇಶಪಾಂಡೆ, ಎನ್.ಜಿ. ಪಾಟೀಲ್, ಎಸ್.ಜಿ. ಬ್ಯಾಹಟ್ಟಿ, ಡಿ.ಬಿ. ಪಾಟೀಲ್, ರಾಜುಗೌಡ ಪಾಟೀಲ, ಪಕ್ಕಜ್ಜ ಕೋರಿ, ಬಸಣ್ಣ ರೂಡಗಿ, ಗಿರೀಶ್ ಗೌಡ್ರು ಪಾಟೀಲ್, ಮೈಲಾರಿ ಕಮಡೊಳ್ಳಿ, ಸಂತೋಷ ಹಿರೇಗೌಡ್ರ, ಗಿರೀಶಗೌಡ ಪಾಟೀಲ್, ಚಂದ್ರಣ್ಣ ಮಳಲಿ, ಮಹಾದೇವಪ್ಪ ಅಣ್ಣಿಗೇರಿ, ಬಸವರಾಜ್ ಬೆಳೆಯಲಿ, ರಮೇಶ ಬೆನಕನ್ನವರ, ರುದ್ರಪ್ಪ ಅಳಗವಾಡಿ, ಹಾಗೂ ಹಲವು ಮೋರ್ಚಾ ಮತ್ತು ವಿವಿಧ ಗ್ರಾಮಗಳ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪೋಟೋ:
ತಾಲ್ಲೂಕಿನ ಸಂಶಿ ಗ್ರಾಮದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾ ಕುಂದಗೋಳ ವತಿಯಿಂದ “ಹರ್ ಘರ್ ತಿರಂಗ” ಯಾತ್ರೆಯ ನಿಮಿತ್ತ ಸಂಶಿ ಗ್ರಾಮದಲ್ಲಿ ಗುರುವಾರದಂದು ಬೈಕ್ ರ‍್ಯಾಲಿ ಆಯೋಜಿಸಲಾಗಿತ್ತು. ನಿವೃತ್ತ ಯೋಧ ಜಗದೀಶ್ ತಮ್ಮಣ್ಣವರ ರ್ಯಾಲಿಗೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *