ಸಂಶಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಅವಿರೋಧ ಆಯ್ಕೆ

Spread the love

ಕುಂದಗೋಳ: ತಾಲ್ಲೂಕಿನ ಸಂಶಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತಕ್ಕೆ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆದಿದೆ. ಶ್ರೀ ಗುರುಶಿದ್ದಪ್ಪ ಹ. ನಾಯ್ಕರ ಅವರು ಅಧ್ಯಕ್ಷರಾಗಿ ಮತ್ತು ಶ್ರೀ ಖಾದರಸಾಬ ಚಾಂದಖಾನವರ ಅವರು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಬುದುವಾರದಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ, ಇಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ್ ಅಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ. ಗೋಕಲೆ ಅವರು ಘೋಷಣೆ ಮಾಡಿದರು.

ಈ ಸಮಯದಲ್ಲಿ ಆಡಳಿತ ಮಂಡಳಿ ವತಿಯಿಂದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು
ನಂತರ ಅಧ್ಯಕ್ಷ ಗುರುಶಿದ್ದಪ್ಪ ಹ ನಾಯ್ಕರ ಮಾತನಾಡಿ ಎಲ್ಲ ಸದಸ್ಯರನ್ನು ವಿಶ್ವಾಸಕಕ್ಕೆ ನಾವು ಸಂಘವನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದೇ ತಮ್ಮ ಮುಖ್ಯ ಉದ್ದೇಶವಾಗಿದ್ದು, ಎಲ್ಲರ ಸಹಕಾರದೊಂದಿಗೆ ಸಂಘವನ್ನು ಮುನ್ನಡೆಸುವುದಾಗಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಎಫ್. ರೂಡಗಿ, ಬಸಪ್ಪ ಜಿ. ಕೊಡ್ಲಿವಾಡ, ನಾಗಪ್ಪ ಕೆ. ಪೂಜಾರ, ತಮ್ಮನಗೌಡ ಇ. ಯರಡ್ಡಿ, ಮಂಜುನಾಥ ತಿ. ಮಲ್ಲೂರ, ಬಸವರಾಜ ಎಫ್. ದ್ಯಾವನೂರ, ಗಜಾನನ ಎಸ್. ಧರಣಿ, ಶ್ರೀಮತಿ ಸುಧಾ ಕೆ. ಕುಂಬಿ, ಶ್ರೀಮತಿ ನಿರ್ಮಲಾ ಕೆ. ಕುರಟ್ಟಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ಮಾಜಿ ಜಿ.ಪಂ ಸದಸ್ಯ ಎನ್.ಎನ್. ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎಸ್. ಪಾಟೀಲ, ಹಿರಿಯರಾದ ಶಿವನಗೌಡ ಪಾಟೀಲ, ಎಸ್.ಎಸ್. ಕೌಜಗೇರಿ, ಎಸ್.ಬಿ. ಪಾಟೀಲ, ಬಿ.ಡಿ. ಪಾಟೀಲ, ವೈ.ಡಿ. ಬಳಗಾನೂರ ಸೇರಿದಂತೆ ಅನೇಕರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Leave a Reply

Your email address will not be published. Required fields are marked *