



ಸಂಶಿ: (ಧಾರವಾಡ) ಗ್ರಾಮದ ಗಣಪತಿ ವಿಸರ್ಜನಾ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಗ್ರಾಮಸ್ಥರು ವ್ಯಕ್ತಪಡಿಸಿದ್ದ ಆಕ್ರೋಶಕ್ಕೆ ಸಂಶಿ ಗ್ರಾಮ ಪಂಚಾಯತಿ ಅಧಿಕಾರಿಗಳು ಸ್ಪಂದಿಸಿದ್ದು, ವೆಬ್ ನ್ಯೂಸ್ ಚಾನೆಲ್ನಲ್ಲಿ ಬಿತ್ತರವಾಗಿದ್ದ ವರದಿಯ ಪರಿಣಾಮವಾಗಿ ತಕ್ಷಣ ಕ್ರಮ ಕೈಗೊಂಡಿದ್ದಾರೆ.
ರವಿವಾರದಂದು ‘ಪಬ್ಲಿಕ್ ಸಮಾಚಾರ’ (ವೆಬ್) ನ್ಯೂಸ್ ಚಾನೆಲ್ನಲ್ಲಿ ವರದಿ ಬಿತ್ತರಗೊಂಡ ನಂತರ ಎಚ್ಚೆತ್ತ ಗ್ರಾಮ ಪಂಚಾಯತಿ ಸಿಬ್ಬಂದಿ ಸೋಮವಾರಂದು ಗಣೇಶ ಮೂರ್ತಿ ವಿಸರ್ಜನೆ ಮಾಡುವ ಕೆರೆ ಪ್ರದೇಶಕ್ಕೆ ಭೇಟಿ ನೀಡಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ.
ವಿಸರ್ಜನಾ ಸ್ಥಳದ ಸುತ್ತಲೂ ಬೆಳೆದಿದ್ದ ಹುಲ್ಲು, ಕಸ ಕಡ್ಡಿಗಳನ್ನು ತೆರವುಗೊಳಿಸಿ, ಸ್ಥಳವನ್ನು ಸ್ವಚ್ಛಗೊಳಿಸಿದರು.
ಇದಲ್ಲದೆ, ರಾತ್ರಿ ಸಮಯದಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಅಲ್ಲಿ ಲೈಟಿಂಗ್ ವ್ಯವಸ್ಥೆಯನ್ನು ಕೂಡ ಕಲ್ಪಿಸಿದರು. ಪಂಚಾಯತಿಯ ಈ ತ್ವರಿತ ಕಾರ್ಯವು ಗಣೇಶ ಮೂರ್ತಿ ವಿಸರ್ಜನೆಗೆ ಬಂದಿದ್ದ ಭಕ್ತರಿಗೆ ಮತ್ತು ಗ್ರಾಮದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದೆ.
ಪಂಚಾಯತಿಯ ಕಾರ್ಯಕ್ಕೆ ಗ್ರಾಮಸ್ಥರಿಂದ ಸಾರ್ವಜನಿಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಸಾರ್ವಜನಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಕೂಡಲೇ ಸ್ಪಂದಿಸಿದ ಗ್ರಾಮ ಪಂಚಾಯತಿಯ ಈ ನಡೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

