ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಕ್ಯಾನ್ಸರ್‌ಗೆ ಬಲಿ

Spread the love

ಮುಂಬೈ: ಖ್ಯಾತ ಕಿರುತೆರೆ ನಟಿ ಪ್ರಿಯಾ ಮರಾಠೆ ಅವರು ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ. 38 ವರ್ಷ ವಯಸ್ಸಿನ ನಟಿ ಮುಂಬೈನ ಮೀರಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಸುಕಿನ 4 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.

ಪವಿತ್ರಾ ರಿಸ್ತಾ ಧಾರಾವಾಹಿಯಲ್ಲಿ ವರ್ಷಾ ಪಾತ್ರದಲ್ಲಿ ನಟಿಸಿ ಅಪಾರ ಜನಪ್ರಿಯತೆ ಗಳಿಸಿದ್ದ ಪ್ರಿಯಾ, ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಯಾ ಸುಖನೋ ಯಾ ಧಾರವಾಹಿಯ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದ ಪ್ರಿಯಾ, ನಂತರ ಚಾ‌ ದಿವಸ್‌ ಸಸುಚೆ ಸೇರಿದಂತೆ ಹಲವು ಮರಾಠಿ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಹಿಂದಿ ಕಿರುತೆರೆಯಲ್ಲೂ ಸಕ್ರಿಯರಾಗಿದ್ದ ಅವರು, ಬಡೇ ಅಚ್ಚೆ ಲಗ್ಗೆ ಹೈ ಧಾರವಾಹಿಯಲ್ಲಿ ಜ್ಯೋತಿ ಮಲ್ಲೋತ್ರಾ ಪಾತ್ರದಲ್ಲಿ ಗಮನ ಸೆಳೆದಿದ್ದರು. ಅಲ್ಲದೆ, ತು ತಿಥೆ ಮಿ ಧಾರಾವಾಹಿ ಮತ್ತು ಜನಪ್ರಿಯ ಕಾರ್ಯಕ್ರಮ ಕಾಮಿಡಿ ಸರ್ಕಸ್‌ನ ಭಾಗವಾಗಿಯೂ ಪ್ರೇಕ್ಷಕರನ್ನು ರಂಜಿಸಿದ್ದರು.

ಪ್ರಿಯಾ ಮರಾಠೆ ಅವರು ತಮ್ಮ ಪತಿ, ನಟ ಶಾಂತನು ಮೋಘೆ ಅವರನ್ನು ಅಗಲಿದ್ದಾರೆ. ಈ ಜೋಡಿ 2012ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ನಟಿಯ ಹಠಾತ್ ನಿಧನ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಆಘಾತ ಮೂಡಿಸಿದೆ.

Leave a Reply

Your email address will not be published. Required fields are marked *