
ಧಾರವಾಡ: ನಗರದ ಮದಿಹಾಳದಲ್ಲಿರುವ ಸಿದ್ಧರಾಮೇಶ್ವರ ಕಾಲನಿಯ ನಿವಾಸಿಯಾಗಿರುವ ಹಾಗೂ ಖ್ಯಾತ ಇಲೆಕ್ಟ್ರಿಕ್ ಉದ್ಯಮಿಯಾಗಿರುವ ಶ್ರೀ ಸಿದ್ಧರಾಮ ಎಸ್. ಹಾಲಳ್ಳಿ (63) ಅವರು ರವಿವಾದಂದು ನಿಧನರಾಗಿದ್ದಾರೆ.
ತಮ್ಮ ವೃತ್ತಿ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದ ಸಿದ್ಧರಾಮ ಹಾಲಳ್ಳಿ ಅವರ ಅಕಾಲಿಕ ನಿಧನದಿಂದ ಕುಟುಂಬ, ಬಂಧುಗಳು ಮತ್ತು ಉದ್ಯಮ ವಲಯದಲ್ಲಿ ದುಃಖದ ವಾತಾವರಣ ಉಂಟಾಗಿದೆ. ಮೃತರು ಪತ್ನಿ ಮತ್ತು ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು (ರವಿವಾರ) ಸಂಜೆ 05 ಗಂಟೆಗೆ ಧಾರವಾಡದ ಮುರುಘಾಮಠದ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

