ತಲೆ ಬೋಳಿಸಿಕೊಂಡ ಕೂಲಿ ಕಾರ್ಮಿಕನನ್ನು ಗುರುತಿಸದ ಡಿಜಿಟಲ್ ಹಾಜರಾತಿ ಆ್ಯಪ್; ಮಹಿಳೆಯ ಕೂದಲಿನಿಂದ ಸಿಕ್ಕ ಪರಿಹಾರ!
Recent Views 91 ಹೈದರಾಬಾದ್, ಮೇ 30: ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೆಲವೊಮ್ಮೆ ಅದರಲ್ಲಿನ ಲೋಪದೋಷಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜೊತೆಗೆ ಹಾಸ್ಯಾಸ್ಪದ ಘಟನೆಗಳಿಗೂ ಕಾರಣವಾಗುತ್ತವೆ. ಇಂತಹ ವಿಚಿತ್ರ ಪ್ರಸಂಗವೊಂದು ತೆಲಂಗಾಣದಲ್ಲಿ ನಡೆದಿದ್ದು, ದೇವಸ್ಥಾನದಲ್ಲಿ ಹರಕೆ ಸಲ್ಲಿಸಿ ತಲೆ ಬೋಳಿಸಿಕೊಂಡು ಬಂದ ಕೂಲಿ ಕಾರ್ಮಿಕನನ್ನು ಸರ್ಕಾರದ ಡಿಜಿಟಲ್ ಹಾಜರಾತಿ ಆ್ಯಪ್ ಗುರುತಿಸಲು ನಿರಾಕರಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ಇನುಗುರ್ತಿ ಮಂಡಲದ ಕೋಮಟಿಪಲ್ಲಿ ಗ್ರಾಮದ ದಿನಗೂಲಿ ಕಾರ್ಮಿಕ ಮಳ್ಳಾಲ…

