ಕುಂದಗೋಳದ ಶಕ್ತಿ ಕ್ಲಿನಿಕ್‌ನಲ್ಲಿ ಸೆ:4 ರಂದು ಉಚಿತ ಬಂಜೆತನ ತಪಾಸಣಾ ಶಿಬಿರ
Recent Views 17 ಕುಂದಗೋಳ: ಪಟ್ಟಣದ ರೇವಡಿಗಾರ ಕಾಂಪ್ಲೆಕ್ಸ್‌ನಲ್ಲಿರುವ ಶಕ್ತಿ ಕ್ಲಿನಿಕ್ ಹಾಗೂ ಸ್ಕ್ಯಾನಿಂಗ್ ಆವರಣದಲ್ಲಿ ಸೆಪ್ಟೆಂಬರ್ 4ರಂದು ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ನೋವಾ ಐವಿಎಫ್ ಫರ್ಟಿಲಿಟಿ ಸಹಯೋಗದೊಂದಿಗೆ ಈ ಶಿಬಿರವನ್ನು ನಡೆಸಲಾಗುತ್ತಿದೆ.ಅಂದು ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಬಂಜೆತನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಉಚಿತ ತಪಾಸಣೆ ಮತ್ತು ಸಲಹೆ ನೀಡಲಾಗುತ್ತದೆ. ಬಂಜೆತನ ಎನ್ನುವದು ಒಂದು ಚಿಕಿತ್ಸೆ ಪಡೆಯಬಹುದಾದ ವೈದ್ಯಕೀಯ ಸ್ಥಿತಿ ಎಂದು ತಜ್ಞರು ತಿಳಿಸಿದ್ದಾರೆ. ಶಿಬಿರದಲ್ಲಿ ನುರಿತ ಫರ್ಟಿಲಿಟಿ ತಜ್ಞರು ಉಪಸ್ಥಿತರಿದ್ದು,…

