ಮಹಾಶಿವರಾತ್ರಿಯಂದೇ ಪಾಕ್‌ಗೆ ಮಣ್ಣು ಮುಕ್ಕಿಸಿದ ಟೀಂ ಇಂಡಿಯಾ: 61 ರನ್‌ಗಳ ಭರ್ಜರಿ ಜಯ!
Recent Views 69 ಕೊಲಂಬೋ: ವಿಶ್ವ ಕ್ರಿಕೆಟ್‌ನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಟಿ20 ವಿಶ್ವಕಪ್‌ನ ಮಹತ್ವದ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 61 ರನ್‌ಗಳ ಅಂತರದಿಂದ ಬಗ್ಗುಬಡಿದಿದೆ. ಶ್ರೀಲಂಕಾದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಈ ಕದನದಲ್ಲಿ ಟೀಂ ಇಂಡಿಯಾ ಸರ್ವಾಂಗೀಣ ಪ್ರದರ್ಶನ ನೀಡಿ ಸಂಭ್ರಮದ ಜಯ ದಾಖಲಿಸಿದೆ. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಆಘಾತ ಎದುರಾದರೂ, ಇಶಾನ್ ಕಿಶನ್ ಪಾಕ್ ಬೌಲರ್‌ಗಳ…

