ಮರೇವಾಡ ಹಾಗೂ ದೇವಲಿಂಗಿಕೊಪ್ಪ ‘ಗ್ರಾಮ-ಒನ್’ ಕೇಂದ್ರಗಳಿಗೆ ಫ್ರಾಂಚೈಸಿಗಳ ನೇಮಕ: ಅರ್ಜಿ ಆಹ್ವಾನ
Recent Views 71 ಧಾರವಾಡ: ಜಿಲ್ಲೆಯ ಮರೇವಾಡ ಹಾಗೂ ದೇವಲಿಂಗಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಖಾಲಿ ಇರುವ ‘ಗ್ರಾಮ-ಒನ್’ ಕೇಂದ್ರಗಳಿಗೆ ಹೊಸದಾಗಿ ಫ್ರಾಂಚೈಸಿಗಳನ್ನು ನೇಮಕ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಧಾರವಾಡ ತಾಲ್ಲೂಕಿನ ಮರೇವಾಡ ಹಾಗೂ ಕಲಘಟಗಿ ತಾಲ್ಲೂಕಿನ ದೇವಲಿಂಗಿಕೊಪ್ಪ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮ-ಒನ್ ಕೇಂದ್ರಗಳ ಫ್ರಾಂಚೈಸಿಗಳು ರಾಜೀನಾಮೆ ನೀಡಿದ ಹಾಗೂ ತಾಂತ್ರಿಕ ಕಾರಣಗಳಿಂದ ಕೇಂದ್ರಗಳನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಇ-ಆಡಳಿತ ಇಲಾಖೆಯ ಇ.ಡಿ.ಸಿ.ಎಸ್. ನಿರ್ದೇಶನಾಲಯದ ಮಾರ್ಗಸೂಚಿಯಂತೆ…

