ಡಾ. ಎಂ.ಎಂ. ಕಲಬುರ್ಗಿ ಸಂಸ್ಮರಣಾ ಉಪನ್ಯಾಸ ನಾಳೆ ಧಾರವಾಡದಲ್ಲಿ ಆಯೋಜನೆ
Recent Views 52 ಧಾರವಾಡ, ನವೆಂಬರ್ 27: ಕನ್ನಡದ ಶ್ರೇಷ್ಠ ಸಂಶೋಧಕ, ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರ ಸಂಸ್ಮರಣೆಯ ದತ್ತಿ ಕಾರ್ಯಕ್ರಮವನ್ನು ಕರ್ನಾಟಕ ವಿದ್ಯಾವರ್ಧಕ ಸಂಘವು ನವೆಂಬರ್ 28, 2025 ರಂದು ಹಮ್ಮಿಕೊಂಡಿದೆ. ಈ ದತ್ತಿ ಉಪನ್ಯಾಸ ಕಾರ್ಯಕ್ರಮವು ಬೆಳಿಗ್ಗೆ 11 ಗಂಟೆಗೆ ಕಲ್ಯಾಣನಗರದಲ್ಲಿರುವ ಡಾ. ಹಿರೇಮಲ್ಲೂರ ಈಶ್ವರನ್ ಪದವಿಪೂರ್ವ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ಪ್ರೊ. ಶಶಿಧರ ತೋಡಕರ ಅವರು ಸಂಘದಲ್ಲಿ ಸ್ಥಾಪಿಸಿದ ದತ್ತಿಯ ಅಂಗವಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ, ಮುಳಗುಂದದ ಶ್ರೀ ಆರ್.ಎನ್. ದೇಶಪಾಂಡೆ…

