ನಾಡಹಬ್ಬ-2025: ಕ.ವಿ.ವ. ಸಂಘದಿಂದ ತಿಂಗಳ ಪೂರ್ಣ ಕಾರ್ಯಕ್ರಮಕ್ಕೆ ಚಾಲನೆ — 3ರಂದು ‘ಡಾ. ಗಣೇಶ ದೇವಿ’ ಅವರಿಂದ ‘ಧರೆಗೆ ದೊಡ್ಡವರು’ ಸಂವಾದ
Recent Views 24 ಧಾರವಾಡ: ನಾಡಿನ ಹೆಮ್ಮೆಯ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ (ಕ.ವಿ.ವ. ಸಂಘ)ವು, 70ನೇ ಕರ್ನಾಟಕ ರಾಜ್ಯೋತ್ಸವ ನಾಡಹಬ್ಬ–2025ರ ಅಂಗವಾಗಿ ನವೆಂಬರ್ 1 ರಿಂದ 30ರವರೆಗೆ ತಿಂಗಳ ಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳ ಸರಣಿಯನ್ನು ಹಮ್ಮಿಕೊಂಡಿದೆ. ಈ ಕುರಿತು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸರಣಿಯ ಅಂಗವಾಗಿ, ನವೆಂಬರ್ 3, 2025ರಂದು ಬೆಳಿಗ್ಗೆ 11 ಗಂಟೆಗೆ ‘ಧರೆಗೆ ದೊಡ್ಡವರು’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬರೋಡಾದ ಅಂತಾರಾಷ್ಟ್ರೀಯ ಭಾಷಾ…

