ಕೆಐಎಡಿಬಿ ಬಹುಕೋಟಿ ಹಗರಣ: ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆಯೇ ಸರ್ಕಾರ? ಸಾಮಾಜಿಕ ಹೋರಾಟಗಾರ ಬಸವರಾಜ ಕೋರವರ ಪ್ರಶ್ನೆ
Recent Views 51 ಧಾರವಾಡ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) ನಡೆದಿದೆ ಎನ್ನಲಾದ ಭೂಪರಿಹಾರ ಹಗರಣದ ಕುರಿತು ಜನಜಾಗೃತಿ ಸಂಘದ ಬಸವರಾಜ ಕೋರವರ ಅವರು ಮಾಧ್ಯಮದೊಂದಿಗೆ ಮಾತನಾಡಿ ಗಂಭೀರ ಆರೋಪಗಳನ್ನು ಮಾಡಿದ್ದು, ಸರ್ಕಾರದ ಮೌನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜಾರಿ ನಿರ್ದೇಶನಾಲಯ (ಇ.ಡಿ) ಈಗಾಗಲೇ ದೋಷಾರೋಪಣ ಪಟ್ಟಿಯಲ್ಲಿ ಹಗರಣದ ಭೀಭತ್ಸ ರೂಪವನ್ನು ಬಯಲಿಗೆಳೆದಿದ್ದರೂ, ಕೆಐಎಡಿಬಿಯ ಹಿರಿಯ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದು ಹಗರಣದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಅವರು ದೂರಿದ್ದಾರೆ. ಈ ಹಗರಣದಲ್ಲಿ…

