ನೀಲಕಂಠಗೌಡ ಪಾಟೀಲ (39) ಎಂಬ ವ್ಯಕ್ತಿ ಕಾಣೆ:

Spread the love

ಗುಡಗೇರಿ: ಸವಣೂರು ತಾಲೂಕಿನ ಮಾದಾಪೂರ ಗ್ರಾಮದ ನಿವಾಸಿ ನೀಲಕಂಠಗೌಡ ಪಾಟೀಲ (39) ಎಂಬಾತ ನಾಪತ್ತೆಯಾಗಿದ್ದಾರೆ.

ನೀಲಕಂಠಗೌಡ ಪಾಟೀಲ ಅವರು ಆಗಸ್ಟ್ 22 ರಂದು ತಮ್ಮ ಪತ್ನಿಯ ತವರೂರಾದ ಮತ್ತಿಗಟ್ಟ ಗ್ರಾಮಕ್ಕೆ ಹೋಗಿದ್ದರು. ಅಲ್ಲಿಂದ ಆಗಸ್ಟ್ 24 ರಂದು ಸಂಜೆ ತಮ್ಮ ಮನೆಗೆ ಹೊರಟಿದ್ದು, ಇದುವರೆಗೂ ಅವರು ಮನೆಗೆ ತಲುಪಿಲ್ಲ. ಕುಟುಂಬದವರು ಹಾಗೂ ಸಂಬಂಧಿಕರು ಎಲ್ಲಾ ಕಡೆ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಸಂಬಂಧ ಗುಡಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಣೆಯಾದ ವ್ಯಕ್ತಿಯ ವಿವರಗಳು ಇಂತಿವೆ:

  • ಹೆಸರು: ನೀಲಕಂಠಗೌಡ ಪಾಟೀಲ
  • ವಯಸ್ಸು: 39 ವರ್ಷ
  • ಎತ್ತರ: 5 ಅಡಿ 3 ಇಂಚು
  • ಮೈಬಣ್ಣ: ಗೋಧಿ ಬಣ್ಣ
  • ಉಡುಪು: ಕೆಂಪು ಮತ್ತು ಕಪ್ಪು ಗೆರೆಯುಳ್ಳ ಫುಲ್ ಶರ್ಟ್ ಹಾಗೂ ಕಪ್ಪು ಪ್ಯಾಂಟ್ ಧರಿಸಿದ್ದಾರೆ.

ಈ ವ್ಯಕ್ತಿ ಕಂಡುಬಂದರೆ, ದಯವಿಟ್ಟು ಗುಡಗೇರಿ ಪೊಲೀಸ್ ಠಾಣೆ (08304/ 262100) ಅಥವಾ ಧಾರವಾಡ ಕಂಟ್ರೋಲ್ ರೂಂ (0836/2233201) ಗೆ ಸಂಪರ್ಕಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *