
ಕುಂದಗೋಳ: ತಾಲ್ಲೂಕಿನ ಗುಡಗೇರಿ ಗ್ರಾಮದ ಪ್ರಸಿದ್ಧ ಶ್ರೀ ದ್ಯಾಮವ್ವಾ ದೇವಿಯ ನವರಾತ್ರಿ ಉತ್ಸವವು ನಾಳೆ (ಸೆಪ್ಟೆಂಬರ್ ೨೨) ದಿಂದ ಅಕ್ಟೋಬರ್ ೨ ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಇಂದು ಘಟಸ್ಥಾಪನೆಯೊಂದಿಗೆ ಆರಂಭವಾಗಲಿರುವ ನವರಾತ್ರಿ ಹಬ್ಬ, ಅಕ್ಟೋಬರ್ ೨ ರಂದು ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಮೂಲಕ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಕೋರಿದೆ.

