ನವಲಗುಂದದಲ್ಲಿ ಪತ್ರಿಕಾ ದಿನಾಚರಣೆ: ಪತ್ರಕರ್ತರ ಹಿತ ಕಾಯಲು ಬದ್ಧ-ಶಾಸಕ ಕೋನರಡ್ಡಿ

Spread the love

ನವಲಗುಂದ: ರಾಜಕೀಯ ಜೀವನದಲ್ಲಿ ನಾವು ಭವಿಷ್ಯ ಕಾಣಲು ಪತ್ರಕರ್ತರ ನಿಸ್ವಾರ್ಥ ಕೊಡುಗೆ ಅಪಾರವಾಗಿದ್ದು, ಅವರ ಹಿತ ಕಾಯಲು ನಾನು ಬದ್ಧ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ಪಟ್ಟಣದ ತಾಲೂಕಾ ಪಂಚಾಯತ್ ಸಭಾ ಭವನದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಹಾಗೂ ಪತ್ರಿಕಾ ವಿತರಕರ ಸಂಘ ಆಯೋಜಿಸಿದ್ದ ಪತ್ರಕರ್ತರ ಮತ್ತು ವಿತರಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗವು ಸರ್ಕಾರಿ ಮಟ್ಟದಲ್ಲಿ ಉತ್ತಮ ಆಡಳಿತ ನಿರ್ಮಾಣಕ್ಕೆ ದೊಡ್ಡ ಪಾತ್ರ ವಹಿಸುತ್ತದೆ. ಪತ್ರಕರ್ತರ ಸಾಮಾಜಿಕ ಸೇವೆಗೆ ನಾನು ಚಿರಋಣಿ. ಸ್ಥಳೀಯ ಪತ್ರಕರ್ತರಿಗೆ ಕೈಲಾದಷ್ಟು ಸೌಲಭ್ಯ ನೀಡಲು ಪ್ರಮಾಣಬದ್ಧನಾಗುವೆ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ ಮಾತನಾಡಿ, ಪತ್ರಕರ್ತರು ಯಾವಾಗಲೂ ಸತ್ಯದ ಪರವಾಗಿ ಇರಬೇಕು. ಇದರಿಂದಾಗಿ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾ.ನೀ.ಪ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರಚಾರ್ಯ ಕುಂದರಗಿ ಉಪನ್ಯಾಸ ನೀಡಿ, ಇಂದಿನ ಪತ್ರಕರ್ತರು ಭಿನ್ನಾಭಿಪ್ರಾಯ ತೋರದೆ ಒಗ್ಗಟ್ಟಿನಿಂದ ಪತ್ರಿಕೆಗಳ ಬಲವನ್ನು ತೋರಿಸಬೇಕು. ಇಂದಿಗೂ ಜನಸಾಮಾನ್ಯರ ಸಮಸ್ಯೆಗಳಿಗೆ ದನಿಯಾಗಿ ನಿಲ್ಲುತ್ತಿರುವುದು ಪತ್ರಿಕೆಗಳು ಮಾತ್ರ ಎಂದು ಹೇಳಿದರು.

ಇದಕ್ಕೂ ಮುನ್ನ ರಾಜ್ಯ ಕಾರ್ಯಕಾರಿಣಿ ಸದಸ್ಯ ಗಣಪತಿ ಗಂಗೋಳ್ಳಿ, ಮಾಧ್ಯಮ ಅಕಾಡೆಮಿ ಸದಸ್ಯರಾದ ಜೆ. ಅಬ್ಬಾಸ ಮುಲ್ಲಾ ಹಾಗೂ ಕಾರ್ಯದರ್ಶಿ ವೀರೇಶ ಹಂಡಗಿ ಅವರು ಪತ್ರಿಕಾರಂಗದ ಸ್ಥಿತಿಗತಿಗಳು ಮತ್ತು ಪತ್ರಕರ್ತರ ಕಾರ್ಯವೈಖರಿ ಕುರಿತು ಮಾತನಾಡಿದರು.

ಈ ಸಮಯದಲ್ಲಿ ಗುಡಿಸಾಗರ ಗ್ರಾ.ಪಂ ಅಧ್ಯಕ್ಷೆ ರತ್ನವ್ಬಾ ಗುಡಸಲಮನಿ, ಶೀಶೈಲ ಮೂಲಿಮನಿ, ವರ್ದಮಾನಗೌಡ ಹಿರೆಗೌಡರ, ಅಣ್ಣಪ್ಪ ಬಾಗಿ, ವಿತರಕರ ಸಂಘದ ಅಧ್ಯಕ್ಷ ಶಿವೂ ಹಲಗಿ ಹಾಗು ಕಾರ್ಯದರ್ಶಿ ನಾಗರಾಜ ಕುಲಕರ್ಣಿ ಸೇರಿದಂತೆ ಹಲವು ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾ. ಕಾ. ನೀ ಪರ್ತಕರ್ತರ ಸಂಘದ ಅಧ್ಯಕ್ಷ ಇಸ್ಮಾಯಿಲ್ ನದಾಫ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ಶ್ರೀಕಾಂತ ಮನ್ವಾಚರಿ, ಹುಚ್ಚಪ್ಪ ಭೋವಿ, ಚಂದ್ರಶೇಖರ ಕೋಟಗಿ, ಈಶ್ವರ ಲಕ್ಕುಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *