
ನವಲಗುಂದ: ಪಟ್ಟಣದ ದೇಸಾಯಿ ಪೇಟೆಯ ಶ್ರೀ ಗಂಗೇ ಬಸವೇಶ್ವರ ದೇವಸ್ಥಾನದ ಗಂಗೇ ಬಸವಣ್ಣ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ದೀಪಾವಳಿ ಪಾಡ್ಯದಿನವಾದ ಬುಧವಾರ ದಿವಸ ವಿಜೃಂಭಣೆಯಿಂದ ಜರುಗಿತು.
ಸಕಲ ವಾದ್ಯಮೇಳದೊಂದಿಗೆ ಗಂಗೇ ಬಸವಣ್ಣ ರಥೋತ್ಸವ ದೇವಸ್ಥಾನದಿಂದ ಪ್ರಾರಂಭವಾದಂತೆ ಭಕ್ತರು ಹರ್-ಹರ್ ಮಹಾದೇವ ಜಯ ಘೋಷಗಳನ್ನು ಹಾಕಿದರು. ಡೊಳ್ಳು-ಕರಡಿ ಮಜಲು ಸದಸ್ಯರಿಂದ ಭಜನೆ ನಡೆಯಿತು, ಮಹಿಳೆಯರು ಆರತಿ ಹಿಡಿದು ನಡೆದರು, ಅಲಂಕೃತ ಭವ್ಯ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ರಥೋತ್ಸವ ಗಣಪತಿ ದೇವಸ್ಥಾನ ತಲುಪಿ ಅಲ್ಲಿ ಪೂಜಾ ಕೈಕಂರ್ಯದ ನಂತರ ಪುನಃ ದೇವಸ್ಥಾನ ತಲುಪಿ ಸದ್ಭಕ್ತರ ಸಮ್ಮುಖದಲ್ಲಿ ಮಹಾ ಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಈ ಸಂದರ್ಭ ಬಿಜೆಪಿ ಮುಖಂಡರು ಹಾಗೂ ಅಣ್ಣಿಗೇರಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರಾದ ದೇವರಾಜ ಬ. ದಾಡಿಭಾವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನಾ-ಆಶೀರ್ವಾದ ಪಡೆದರು. ನಂತರ ದೇವರಾಜ ದಾಡಿಭಾವಿ ಅವರನ್ನು ದೇಸಾಯಿ ಪೇಟೆ ಗುರು- ಹಿರಿಯರು ಸನ್ಮಾನಿಸಿ ಗೌರವಿಸಿದರು ಮತ್ತು ನೂತನ ದೇವಸ್ಥಾನ ನಿರ್ಮಾಣ ಕುರಿತು ಚರ್ಚೆ ನಡೆಸಿದರು.
ಈ ವೇಳೆ ರಾಯನಗೌಡ ಪಾಟೀಲ, ಬಸಣ್ಣ ಹರಿವಾಳ, ಮಲ್ಲಯ್ಯ ಗೌರಿಮಠ, ಪ್ರಕಾಶ್ ಶಿಗ್ಲಿ, ಶಿವಪ್ಪ ಸಂಗಟಿ, ಶಿವಪುತ್ರಪ್ಪ ಖಂಡಿಬಾಗಿಲ, ಯಲ್ಲಪ್ಪ ಯಳಮಲಿ, ನಿಂಗಪ್ಪ ಕೊಟಗಿ, ಮಂಜುನಾಥ ಸುಬೆದಾರ, ಸಾಯಿಬಾಬಾ ಆನೆಗುಂದಿ, ಈರಣ್ಣ ಹರಿವಾಳ, ಶಂಕರಪ್ಪ ಸಂಗಟಿ, ಮಂಜು ಖಂಡಿಭಾಗಿಲ್, ಶಂಕರ ಗೌರಿಮಠ, ಮಹೇಶ ಕುರ್ತಕೋಟಿ, ಸಿದ್ದು ಯಲಿಗಾರ, ಉಮೇಶ್ ಹಂಚಿನಾಳ, ಚಂದ್ರು ಕೊಟಗಿ ಸೇರಿದಂತೆ ಗುರು-ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.

