ಕುಂದಗೋಳ ಮತಕ್ಷೇತ್ರದಲ್ಲಿ ಶಾಸಕ ಎಂ.ಆರ್.ಪಾಟೀಲ್ ಅವರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

Spread the love

ಕುಂದಗೋಳ: ರವಿವಾರದಂದು ಕುಂದಗೋಳ ಮತಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಎಂ.ಆರ್. ಪಾಟೀಲ್ ಅವರು ಹೊಸ ಕಾಮಗಾರಿಗಳ ಆರಂಭ ಮತ್ತು ನೂತನ ಕಟ್ಟಡಗಳ ಉದ್ಘಾಟನೆಯಲ್ಲಿ ಭಾಗವಹಿಸಿ, ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಿದರು.

ಶಾಲಾ ಕೊಠಡಿಗಳ ಉದ್ಘಾಟನೆ ಮತ್ತು ರಸ್ತೆ ಕಾಮಗಾರಿಗೆ ಚಾಲನೆ
ರಾಯನಾಳ ಗ್ರಾಮದ ಕಲಗನಮಡ್ಡಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ NTPC CSR ಯೋಜನೆಯಡಿ ನಿರ್ಮಿಸಲಾದ 31.40 ಲಕ್ಷ ರೂಪಾಯಿ ವೆಚ್ಚದ ಎರಡು ಹೊಸ ಶಾಲಾ ಕೊಠಡಿಗಳನ್ನು ಉದ್ಘಾಟಿಸಲಾಯಿತು. ಇದರ ಜೊತೆಗೆ, ರಾಯನಾಳ ಗ್ರಾಮದಲ್ಲಿ ಸಿ.ಸಿ. ರಸ್ತೆ ಕಾಮಗಾರಿಗೂ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಷಣ್ಮುಖ ಐಹೊಳೆ, ಗ್ರಾಮ ಪಂಚಾಯತ್ ಅಧ್ಯಕ್ಷ ರ.ಜಿ.ಮೇಟಿ, ಉಪಾಧ್ಯಕ್ಷ ಮಾರಡಗಿ, ಮುಖಂಡರಾದ ನಿಂಗನಗೌಡ ಮರಿಗೌಡ್ರ, ಸಹದೇವ್ ಮಲಗಿ, ಮಾಲತೇಶ್ ಶ್ಯಾಗೋಟಿ, ಟಿ.ಜಿ. ಬಾಲಣ್ಣವರ್, ಪ್ರತಾಪ್ ಪಾಟೀಲ್, ನಾಗಲಿಂಗ್ ಪೂಜಾರ್, ಶಿಕ್ಷಕರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಪರಸಾಪೂರದಲ್ಲಿ ಗ್ರಾಮದೇವಿ ದೇವಸ್ಥಾನದ ಭೂಮಿ ಪೂಜೆ
ಹುಬ್ಬಳ್ಳಿ ಮಂಡಲದ ಪರಸಾಪೂರ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಂಸದರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣವಾಗಲಿರುವ ಶ್ರೀ ಗ್ರಾಮದೇವಿ ದೇವಸ್ಥಾನಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಕ್ಷದ ಮಂಡಲ ಅಧ್ಯಕ್ಷ ಷಣ್ಮುಖ ಐಹೊಳೆ, ಹಿರಿಯರಾದ ಈರಣ್ಣ ಜಡಿ, ಟಿ.ಜಿ. ಬಾಲಣ್ಣವರ್, ಮಾಲತೇಶ ಶ್ಯಾಗೋಟಿ, ನಿಂಗನಗೌಡ ಮರಿಗೌಡ್ರ, ಸಹದೇವ ಮಾಳಗಿ, ನಾಗಲಿಂಗ ಪೂಜಾರ, ಪ್ರತಾಪ ಪಾಟೀಲ, ಕಲ್ಲಪ್ಪ ಮೊರಬದ, ದೇವರಗುಡಿಹಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಖಾತುನಬಿ ಲಾಡಸಾಬನವರ, ರಾಯನಾಳ ಗ್ರಾ.ಪಂ. ಅಧ್ಯಕ್ಷ ರುದ್ರಪ್ಪ ಮೇಟಿ, ಸದಸ್ಯರು, ಪಕ್ಷದ ಪದಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಭಾಗವಹಿಸಿದ್ದರು.

ಶಾಸಕ ಎಂ.ಆರ್. ಪಾಟೀಲ್ ಅವರು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿ, ಗ್ರಾಮಗಳ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯ ಎಂದು ತಿಳಿಸಿದರು. ಈ ಯೋಜನೆಗಳು ಕ್ಷೇತ್ರದ ಜನರ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *