ಮಹಾನ್ ಗ್ರಂಥ ರಾಮಾಯಣದ ಕರ್ತೃ ಮಹರ್ಷಿ ವಾಲ್ಮೀಕಿ: ಎಚ್.ಎಸ್. ಲಕ್ಷ್ಮೇಶ್ವರ

Spread the love

ಕುಂದಗೋಳ: ಮಹರ್ಷಿ ವಾಲ್ಮೀಕಿಯವರು ವಿಶ್ವ ಜಗತ್ತಿಗೆ ರಾಮಾಯಣದಂತಹ ಮಹಾನ್ ಗ್ರಂಥ ಕಾವ್ಯವನ್ನು ರಚಿಸಿಕೊಟ್ಟ ಅಪರೂಪದ ಸಾಹಿತಿ ಎಂದು ಗ್ರಾಮ ಪಂಚಾಯತಿ ಸದಸ್ಯ ಎಚ್.ಎಸ್. ಲಕ್ಷ್ಮೇಶ್ವರ ಅಭಿಪ್ರಾಯಪಟ್ಟರು.

​ ತಾಲೂಕಿನ ಸಂಶಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಭವನದಲ್ಲಿ (ಮಂಗಳವಾರ) ವಿಶ್ವ ಪ್ರಸಿದ್ಧ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ಜ್ಞಾನ ಶಿಕ್ಷಣದ ಕೊಡುಗೆ:

​ಶ್ರೀ ಮಹರ್ಷಿ ವಾಲ್ಮೀಕಿಯವರು ನೀಡಿದ ಜ್ಞಾನ ಮತ್ತು ಶಿಕ್ಷಣದ ಕೊಡುಗೆಯನ್ನು ಸರ್ವ ಜನಾಂಗದವರು ಜಯಂತಿಯ ದಿನದಂದು ಸ್ಮರಿಸಬೇಕು. ರಾಮಾಯಣದ ಮೂಲಕ ಪುರುಷೋತ್ತಮ ಶ್ರೀರಾಮನ ಮಹತ್ವವನ್ನು ತಿಳಿಸಿದ ಮಹಾನ್ ಸಂತರು ವಾಲ್ಮೀಕಿ ಮಹರ್ಷಿಗಳು ಎಂದು ಲಕ್ಷ್ಮೇಶ್ವರ ಹೇಳಿದರು.

​ನಂತರ, ಸಂಶಿ ವಲಯದ ಎಲ್.ಎಚ್.ವಿ. ಅಧಿಕಾರಿ ಎಂ.ಜಿ. ಭಟ್ ಅವರು ಮಹರ್ಷಿಗಳ ಜಯಂತಿಯ ಮಹತ್ವ ಮತ್ತು ರಾಮಾಯಣದ ಕುರಿತು ಮಾತನಾಡಿದರು.

​ಇದೇ ಸಂದರ್ಭದಲ್ಲಿ ಆರೋಗ್ಯ ಕೇಂದ್ರದ ಹಿರಿಯ ಸಿಬ್ಬಂದಿಗಳಾದ ನಾಗಮ್ಮ ಹರಕುಣಿ, ಕವಿತಾ ಕೆ.ಎಚ್., ಸುಜಾತ ಕಾಗದ, ಜಯಮ್ಮ, ವಿ. ನಾಗರಾಜ್ ನೇಕಾರ್, ಪರಮೇಶಪ್ಪ ಶಿವಳ್ಳಿ ಮೊದಲಾದವರು ಹಾಜರಿದ್ದರು.

​ರೈತ ಸಂಪರ್ಕ ಕೇಂದ್ರದಲ್ಲೂ ಆಚರಣೆ

​ಸ್ಥಳೀಯ ರೈತ ಸಂಪರ್ಕ ಕೇಂದ್ರದ ಸಭಾಭವನದಲ್ಲಿ ಕೂಡ ಮಂಗಳವಾರದಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮೂಲಕ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ನಡೆಯಿತು.

​ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಯಾದ ಜಯರಾಮ್ ಎಂ.ಕೆ., ಕೇಂದ್ರದ ಸಹಾಯಕ ಸಿಬ್ಬಂದಿಗಳಾದ ಶಂಕರಗೌಡ ಜಿ. ನೆರ್ತಿ, ಗುರುನಾಥ್ ಆಡಿನ, ರವಿಚಂದ್ರ ಕಟಗಿ, ಪರಶುರಾಮ್ ಕಟಗಿ, ಚಿದಾನಂದ್ ಇಟಗಿ, ಎಲ್ಲಪ್ಪ ಆಡಿನ ಹಾಗೂ ಸ್ಥಳೀಯ ರೈತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *