
ಕುಂದಗೋಳ: ತಾಲ್ಲೂಕಿನ ಸಂಶಿ ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಸೋಮವಾರದಂದು ಇಲ್ಲಿನ ಶ್ರೀ ಶರೀಫ ಶಿವಯೋಗಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಥೋತ್ಸವಕ್ಕೆ ವಿರಕ್ತಮಠದ ಚನ್ನಬಸವ ದೇವರು ಅವರು ಭಕ್ತಿಪೂರ್ವಕವಾಗಿ ಚಾಲನೆ ನೀಡಿದರು.
ಹಲಾವಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ರಥೋತ್ಸವವು, ಜಯಘೋಷಗಳು ಮತ್ತು ಭಜನೆಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಭಕ್ತರು ರಥಕ್ಕೆ ಹೂವು, ಹಣ್ಣುಗಳನ್ನು ಅರ್ಪಿಸಿ ತಮ್ಮ ಭಕ್ತಿ ಸಮರ್ಪಿಸಿದರು. ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆದ ಈ ರಥೋತ್ಸವದಲ್ಲಿ ಜಾತಿ-ಮತ ಭೇದವಿಲ್ಲದೆ ಸಕಲ ಭಕ್ತರೂ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಿರೀಶ್ ಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲೇಶ್ ಬೆಳವಡಿ ಮತ್ತು ಬಸವರಾಜ್ ನಾಯ್ಕರ್, ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಲೋಕೇಶ್ ಸರಾವರಿ, ಹಾಗೂ ಮಂಜುನಾಥ್ ಮಂಟೂರ್, ಸಿದ್ದಪ್ಪ ಗಜೇಂದ್ರಗಡ, ನಾಗರಾಜ್ ಚನ್ನಪ್ಪನವರ್, ಬ್ರಹ್ಮಾನಂದ ಗಜೇಂದ್ರಗಡ, ರಾಜು ಸೇರಿದಂತೆ ಹಲವು ಗಣ್ಯರು ಹಾಗೂ ಸಾವಿರಾರು ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

