ಸಂಗೊಳ್ಳಿ ರಾಯಣ್ಣ ಜಯಂತಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಮಣ್ ಡೊಂಗರೆ ಅವರಿಗೆ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ಪ್ರದಾನ

Spread the love

ಸಂಗೊಳ್ಳಿ ರಾಯಣ್ಣ ಜಯಂತಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಲಕ್ಷ್ಮಣ್ ಡೊಂಗರೆ ಅವರಿಗೆ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ಪ್ರದಾನ

ಹುಬ್ಬಳ್ಳಿ: ಗಂಡುಮೆಟ್ಟಿನ ನಾಡು ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ, 79ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 231ನೇ ಜಯಂತಿ ಉತ್ಸವದ ಸಂದರ್ಭದಲ್ಲಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಯ ಸಹಾಯ ಸಂಚಾರ ನಿರೀಕ್ಷಕ ಲಕ್ಷ್ಮಣ್ ಡೊಂಗರೆ ಅವರಿಗೆ 2025ನೇ ಸಾಲಿನ ‘ಅತ್ಯುತ್ತಮ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
LFD” ಎಂದೇ ಖ್ಯಾತಿ ಪಡೆದಿರುವ ಲಕ್ಷ್ಮಣ್ ಡೊಂಗರೆ ಅವರು ತಮ್ಮ ಸೃಜನಶೀಲತೆ, ಹಸನ್ಮುಖ ಸ್ವಭಾವ ಮತ್ತು ಎಲ್ಲ ನೌಕರರೊಂದಿಗೆ ಸಮಾನವಾಗಿ ಬೆರೆಯುವ ಗುಣಕ್ಕಾಗಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರು ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂದರೆ ತಪ್ಪಾಗಲಾರದು, ಬಸವಣ್ಣನವರ ‘ಇವನಾರವ, ಇವ ನಮ್ಮವ’ ವಚನದಂತೆ ಕಾಯಕದಲ್ಲಿ ಕಾಯಕಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಗೊಳ್ಳಿ ರಾಯಣ್ಣ ಜಯಂತಿ ಸಮಿತಿ ಮತ್ತು ನಿಗಮದ ಅಧಿಕಾರಿ ಹಾಗೂ ನೌಕರರ ಪರವಾಗಿ, ಲಕ್ಷ್ಮಣ್ ಡೊಂಗರೆ ಅವರ ಸೇವೆಗೆ ಅಭಿನಂದನೆ ಸಲ್ಲಿಸಲಾಯಿತು. ಅವರ ಕಾಯಕ ನಿಷ್ಠೆ ಮತ್ತು ಸಮಾಜದ ಕುರಿತಾದ ಚಿಂತನೆಗಳಿಗಾಗಿ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದು ಎಲ್ಲರೂ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ, ಲಕ್ಷ್ಮಣ್ ಡೊಂಗರೆ ಅವರ ಮುಂದಿನ ಜೀವನದಲ್ಲಿ ಸುಖ-ಸಂಪತ್ತು, ಆಯುರಾರೋಗ್ಯ ಮತ್ತು ಉನ್ನತ ಸ್ಥಾನಮಾನಗಳು ಲಭಿಸಲಿ ಎಂದು ಅವರ ಅಭಿಮಾನಿ ವೃಂದ ಹಾರೈಸಿತು. ಅವರ ಸಾಧನೆಗೆ ಇನ್ನೂ ಅನೇಕ ಪ್ರಶಸ್ತಿಗಳು ದೊರೆಯಲಿ ಎಂದು ಹಾರೈಸುವ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

Leave a Reply

Your email address will not be published. Required fields are marked *