
ಪೋಟೋ: ಕುಂದಗೋಳ
ತಾಲ್ಲೂಕಿನ ಹರ್ಲಾಪೂರ ಗ್ರಾಮದಲ್ಲಿ ಗುರುವಾರದಂದು ಜರುಗಿದ ಜಿಲ್ಲಾ ಮಟ್ಟದ ಮಲ್ಲಗಂಬ ಸ್ವರ್ದೆಯಲ್ಲಿ ವಿಜೇತರಾದ ಕ್ರೀಡಾ ಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕುಂದಗೋಳ: ತಾಲ್ಲೂಕಿನ ಹರ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಧಾರವಾಡ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮಲ್ಲಕಂಬ ಮತ್ತು ಹಗ್ಗದ ಮಲ್ಲಕಂಬ ಸ್ಪರ್ಧೆಯಲ್ಲಿ ಹರ್ಲಾಪುರ ತಂಡವು ಮೂರು ವಿಭಾಗಗಳಲ್ಲಿ ಚಾಂಪಿಯನ್ ಟ್ರೋಫಿಗಳನ್ನು ಗೆದ್ದು ಪ್ರಾಬಲ್ಯ ಮೆರೆದಿದೆ.
ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ, ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಧಾರವಾಡ ಹಾಗೂ ಕುಂದಗೋಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದೊಂದಿಗೆ ಗುರುವಾರದಂದು ಈ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಹಿರಿಯರು ಮತ್ತು ಹಳೆ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದರು.
ಜಿಲ್ಲಾ ಮಟ್ಟದ ಮಲ್ಲಗಂಬ ಸ್ವರ್ದೆಯಲ್ಲಿ ವಿಜತರಾದವರಿಗೆ ಬಹುಮಾನ ವಿತರಿಸಲಾಯಿತು
14 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ದೀಪ ದೊಡ್ಡಮನಿ ಪ್ರಥಮ, ಸುಶ್ಮಿತಾ ಕೌದಿಮಠ ದ್ವಿತೀಯ, ಪ್ರಿಯಾ ಅಂಗಡಿ ತೃತೀಯ ಹಾಗೂ ಕೀರ್ತಿ ಹರಕುಣಿ ಚತುರ್ಥ ಸ್ಥಾನ ಪಡೆದರು. ಹಾಗೂ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಶ್ರೀಶಾಂತ್ ಕಮ್ಮಾರ್ ಪ್ರಥಮ, ಮಣಿಕಂಠ ಮುಗಳಿ ದ್ವಿತೀಯ, ಸಾಗರ್ ತೃತೀಯ ಹಾಗೂ ವಿಶ್ವಜ್ಞ ಕುಲಕರ್ಣಿ ಚತುರ್ಥ ಸ್ಥಾನ ಪಡೆದುಕೊಂಡರು.
17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಐಶ್ವರ್ಯ ಮುಗಳಿ ಪ್ರಥಮ, ರತ್ನ ಶೋಗೋಟಿ ದ್ವಿತೀಯ, ಅನ್ನಪೂರ್ಣ ತಸಿಲ್ದಾರ್ ತೃತೀಯ, ಹೇಮ ಬಳೆಗಾರ ಚತುರ್ಥ ಸ್ಥಾನಕ್ಕೆ ಭಾಜನರಾದರು. ಹಾಗೂ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಉಮೇಶ್ ದೊಡ್ಡಮನಿ ಪ್ರಥಮ, ಪಂಚಾಕ್ಷರಿ ಹಿರೇಮಠ್ ದ್ವಿತೀಯ, ಬಸವರಾಜ್ ಕಟ್ಟಿಮನಿ ತೃತೀಯ ಮತ್ತು ಪ್ರೀತಮ್ ಸೂರುಣಗೆ ಚತುರ್ಥ ಸ್ಥಾನ ಗಳಿಸಿದರು.
ಚಾಂಪಿಯನ್ ಟ್ರೋಫಿ:
14 ವರ್ಷದೊಳಗಿನ ಬಾಲಕರು, 14 ವರ್ಷದೊಳಗಿನ ಬಾಲಕಿಯರು ಮತ್ತು 17 ವರ್ಷದೊಳಗಿನ ಬಾಲಕರ ವಿಭಾಗದ ಚಾಂಪಿಯನ್ ಟ್ರೋಫಿಗಳನ್ನು ಹರ್ಲಾಪುರ ತಂಡ ಗೆದ್ದುಕೊಂಡರೆ, 17 ವರ್ಷದೊಳಗಿನ ಬಾಲಕಿಯರ ವಿಭಾಗದ ಟ್ರೋಫಿಯನ್ನು ಶಿರುಗುಪ್ಪಿ ತಂಡ ಪಡೆದುಕೊಂಡಿತು.
ಕಾರ್ಯಕ್ರಮದಲ್ಲಿ, ವಿಜೇತರಿಗೆ ಟ್ರೋಫಿಗಳನ್ನು ರಾಷ್ಟ್ರೀಯ ಮಲ್ಲಕಂಬ ಪಟು ಹಾಗೂ ಯೋಧ ರವಿ ಓಲೆಕಾರ್, ನಿವೃತ್ತ ಮುಖ್ಯೋಪಾಧ್ಯಾಯ ಎನ್.ಓ. ಹಡಗಲಿ, ನಿವೃತ್ತ ದೈಹಿಕ ಶಿಕ್ಷಕ ಎಚ್.ಆರ್. ಕತ್ತಿ, ಮತ್ತು ಪ್ರಗತಿಪರ ರೈತ ಅಬ್ದುಲ್ ಸಾಬ್ ನದಾಫ್ ಅವರು ವಿತರಿಸಿದರು.
ಇದೇ ವೇಳೆ, ಗ್ರಾಮದಿಂದ ರಾಷ್ಟ್ರಮಟ್ಟದಲ್ಲಿ ಮಲ್ಲಕಂಬದಲ್ಲಿ ಭಾಗವಹಿಸಿದ್ದ ಹಳೆ ಕ್ರೀಡಾಪಟುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

