ಅಮೇರಿಕಾದಲ್ಲಿ ಚಾರ್ಲಿ ಕಿರ್ಕ ಹತ್ಯೆ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ

Spread the love

ವಾಷಿಂಗ್ಟನ್, ಸೆ.11:
ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಪ್ತ ಸಹಾಯಕರಲ್ಲಿ ಒಬ್ಬನಾಗಿ ಗುರುತಿಸಿಕೊಂಡಿದ್ದ ಬಲಪಂಥೀಯ ಟಾಕ್‌ಶೋ ನಿರೂಪಕ ಮತ್ತು ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ (31) ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ.

ಘಟನೆ ಸೆಪ್ಟೆಂಬರ್ 10ರಂದು ಉತಾಹ್ ವ್ಯಾಲಿ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದಿದೆ. “ದಿ ಅಮೇರಿಕನ್ ಕಮ್ಯಾಕ್ ಟೂರ್” ಹೆಸರಿನ ತನ್ನ ರಾಷ್ಟ್ರೀಯ ಭಾಷಣ ಸರಣಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಮಾತನಾಡುತ್ತಿದ್ದಾಗಲೇ ಅಕಸ್ಮಾತ್ ದಾಳಿಕೋರ ಗುಂಡು ಹಾರಿಸಿದ. ಗುಂಡು ಕಿರ್ಕ್ ಅವರ ಕುತ್ತಿಗೆಗೆ ತಗುಲಿದ್ದು, ಅವರು ಅಲ್ಪ ಸಮಯದಲ್ಲೇ ಕುಸಿದು ಮೃತಪಟ್ಟಿದ್ದಾರೆ ಎಂದು ದೃಶ್ಯ ಸಾಕ್ಷಿಗಳು ತಿಳಿಸಿವೆ.

ಈ ಘಟನೆ ನಡೆದ ಕ್ಷಣದ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮೇರಿಕಾದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಆವರಣದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.

Leave a Reply

Your email address will not be published. Required fields are marked *