ಕಾರ್ಕಳ: ಸುಮೇಧಾ ಫ್ಯಾಷನ್ ಇನ್‌ಸ್ಟಿಟ್ಯೂಟ್‌ನಿಂದ ಉಚಿತ ಫ್ಯಾಷನ್ ಡಿಸೈನಿಂಗ್ ಕಾರ್ಯಾಗಾರ

Spread the love

ಕಾರ್ಕಳ: ಸ್ಥಳೀಯ ಎಸ್.ಜೆ. ಆರ್ಕೇಡ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮೇಧಾ ಫ್ಯಾಷನ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಸಕ್ತ ಅಭ್ಯರ್ಥಿಗಳಿಗಾಗಿ ಉಚಿತ ಫ್ಯಾಷನ್ ಡಿಸೈನಿಂಗ್ ವರ್ಕ್‌ಶಾಪ್ ಆಯೋಜಿಸಲಾಗಿದೆ. ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದ್ದು, ಮಾರ್ಚ್ 25 ರಿಂದ ಮಾರ್ಚ್ 30ರ ವರೆಗೆ ಈ ತರಬೇತಿ ಶಿಬಿರ ನಡೆಯಲಿದೆ.

​ಈ ವಿಶೇಷ ಕಾರ್ಯಾಗಾರದಲ್ಲಿ ಫ್ಯಾಷನ್ ಕ್ಷೇತ್ರದ ಪ್ರಾಥಮಿಕ ಮಾಹಿತಿಯೊಂದಿಗೆ ಹೂಪ್ ಆರ್ಟ್, ಜ್ಯುವೆಲ್ಲರಿ ಮೇಕಿಂಗ್ ಹಾಗೂ ಮೆಹೆಂದಿ ಕಲೆಯ ಬಗ್ಗೆ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ವಿಶೇಷವಾಗಿ ಪಿಯುಸಿ ಶಿಕ್ಷಣ ಮುಗಿಸಿದ 17 ರಿಂದ 25 ವರ್ಷ ವಯೋಮಿತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪಠ್ಯಕ್ರಮವನ್ನು ರೂಪಿಸಲಾಗಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಆಸಕ್ತರಿಗೆ ಪ್ರಮಾಣಪತ್ರವನ್ನು ಸಹ ವಿತರಿಸಲಾಗುವುದು.

​ನಿಗದಿತ ದಿನಗಳಂದು ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ ತರಬೇತಿ ನಡೆಯಲಿದ್ದು, ಸೀಟುಗಳ ಸಂಖ್ಯೆ ಸೀಮಿತವಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದಣಿಗಾಗಿ ಮೊಬೈಲ್ ಸಂಖ್ಯೆ 7353211991 ಅಥವಾ 8147532590 ಸಂಪರ್ಕಿಸುವಂತೆ ಸಂಸ್ಥೆಯು ಪ್ರಕಟಣೆಗೆ ತಿಳಿಸಿದೆ.

Leave a Reply

Your email address will not be published. Required fields are marked *