ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಧಾರವಾಡದಿಂದ ವಿಧಾನಸೌಧದವರೆಗೆ ಬೈಕ್ ಜಾಥಾ

Spread the love

ಧಾರವಾಡ: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ, ವಿಜೇತಕುಮಾರ ಹೊಸಮಠ ನೇತೃತ್ವದಲ್ಲಿ 10 ಬೈಕ್ ರೈಡರ್‌ಗಳ ತಂಡ ಧಾರವಾಡದಿಂದ ವಿಧಾನಸೌಧದವರೆಗೆ ಬೈಕ್ ಜಾಥಾ ನಡೆಸಿ ಗಮನ ಸೆಳೆದಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕ್ರೀಡಾ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸೆಪ್ಟೆಂಬರ್ 14, 2025ರಂದು ಈ ಜಾಥಾ ಆಯೋಜಿಸಲಾಗಿತ್ತು.

ಸಿಇಒ ಭುವನೇಶ ಪಾಟೀಲರಿಂದ ಚಾಲನೆ
ಕರ್ನಾಟಕ ಕಾಲೇಜು ಮೈದಾನದಿಂದ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಯುವಕರು ಪ್ರಜಾಪ್ರಭುತ್ವದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ತೆಗೆದುಕೊಂಡ ಈ ನಿರ್ಧಾರವನ್ನು ಶ್ಲಾಘಿಸಿದರು.

ಬೈಕ್ ರೈಡರ್‌ಗಳ ತಂಡ ಸೆಪ್ಟೆಂಬರ್
14ರಂದು ಧಾರವಾಡದಿಂದ ಹೊರಟು ಅದೇ ರಾತ್ರಿ ಬೆಂಗಳೂರು ತಲುಪಿತು. ಸೆಪ್ಟೆಂಬರ್ 15ರಂದು ವಿಧಾನಸೌಧದ ಮುಂದೆ ನಡೆದ ಪ್ರಜಾಪ್ರಭುತ್ವ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿತು. ನಂತರ, ಸೆಪ್ಟೆಂಬರ್ 16ರಂದು ಸುರಕ್ಷಿತವಾಗಿ ಧಾರವಾಡಕ್ಕೆ ಮರಳಿದೆ.

ಜಾಥಾಕ್ಕೆ ಬೆಂಬಲ
ಬೈಕ್ ಜಾಥಾದ ಬಿಳ್ಕೊಡುಗೆ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಶುಭ ಪಿ. ಹಾಗೂ ಕ್ರೀಡಾ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಸದಾನಂದ ಅಮರಾಪುರ ಉಪಸ್ಥಿತರಿದ್ದು, ತಂಡಕ್ಕೆ ಶುಭ ಹಾರೈಸಿದರು. ಈ ಜಾಥಾ ಪ್ರಜಾಪ್ರಭುತ್ವದ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *