ಹುಲ್ಲಂಬಿ ಗ್ರಾಮದಲ್ಲಿ ₹೨೦ ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

Spread the love

ಕಲಘಟಗಿ: ತಾಲ್ಲೂಕಿನ ಹುಲ್ಲಂಬಿ ಗ್ರಾಮದಲ್ಲಿ ಕಾರ್ಮಿಕ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರ ವಿಶೇಷ ಅನುದಾನದಡಿ ಮಂಜೂರಾದ ೨೦ ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಯಿತು.

ಬಸಪ್ಪ ನಾಯ್ಕರ ಅವರ ಮನೆಯಿಂದ ಈರಪ್ಪ ವಡ್ಕಪ್ಪನವರ ಮನೆಯವರೆಗಿನ ರಸ್ತೆ ನಿರ್ಮಾಣಕ್ಕೆ ಈ ಅನುದಾನವನ್ನು ಒದಗಿಸಲಾಗಿದೆ. ಸಚಿವರ ಆಪ್ತ ಸಹಾಯಕ ಶ್ರೀ ಸೋಮಶೇಖರ ಬೆನ್ನೂರ ಅವರು ಭೂಮಿಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುರುನಾಥ್ ಹರಿಜನ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಂಕ್ರಪ್ಪ ಸಾಧರ, ಗ್ರಾಮದ ಹಿರಿಯರಾದ ಶಿವಪ್ಪ ಕುಡುಬಾವಿ, ಬಸಪ್ಪ ನಾಯ್ಕರ, ಯಲ್ಲಪ್ಪ ಸುಣಗಾರ, ಬಸವನಗೌಡ ಪಾಟೀಲ, ಶಿವನಗೌಡ ಪಾಟೀಲ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಚಪ್ಪ ಬಿಸರಳ್ಳಿ ಉಪಸ್ಥಿತರಿದ್ದರು.

ಇದೇ ವೇಳೆ ದ್ಯಾಮಣ್ಣ ಹುಲಿಗೆಪ್ಪನವರ, ಮಹಾದೇವ ಸಾದರ, ಸಿದ್ದಪ್ಪ ಸಾದರ, ಮಹಾದೇವ ಸುತಗಟ್ಟಿ, ಗುರುಸಿದ್ದಪ್ಪ ನೀರಲಕಟ್ಟಿ, ನಿಂಗಪ್ಪ ನಾಯ್ಕರ, ಶಿವಪ್ಪ ನೀರಲಕಟ್ಟಿ, ಮಂಜುನಾಥ್ ಮುಗಣ್ಣವರ, ಬಸವರಾಜ ದಾಸನಕೊಪ್ಪ ಹಾಗೂ ಗ್ರಾಮದ ಯುವಕರಾದ ದ್ಯಾಮಣ್ಣ ಹುಲಕೊಪ್ಪ, ಕಿರಣ ರೇವಡಿಹಾಳ, ಶ್ರೀಕಾಂತ್ ಹೊನ್ನಳ್ಳಿ, ಕಲ್ಮೇಶ ಕುಡುಬಾವಿ, ಕಲ್ಮೇಶ ಶೀಗಟ್ಟಿ, ಬಸವರಾಜ ಕುಡುಬಾವಿ ಮುಂತಾದವರು ಉಪಸ್ಥಿತರಿದ್ದು, ಕಾಮಗಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಈ ರಸ್ತೆಯ ನಿರ್ಮಾಣದಿಂದ ಗ್ರಾಮಸ್ಥರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ.

Leave a Reply

Your email address will not be published. Required fields are marked *