
ಹುಬ್ಬಳ್ಳಿ: ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಶುಭಾಶಯ ಕೋರಿದ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಷಣ್ಮುಖ ಶಿವಳ್ಳಿ ಅವರು, ಗಣೇಶ ಹಬ್ಬವು ಎಲ್ಲರ ಬಾಳಿನಲ್ಲಿ ಸುಖ-ಸಮೃದ್ಧಿ ತರಲಿ ಎಂದು ಹಾರೈಸಿದರು.
ಯರಗುಪ್ಪಿ ಗ್ರಾಮದಲ್ಲಿ ನಡೆದ ಗಣೇಶ ಹಬ್ಬದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಗಣೇಶನು ವಿಘ್ನನಿವಾರಕ. ಈ ಹಬ್ಬವು ನಾಡಿನ ಜನತೆಗೆ, ವಿಶೇಷವಾಗಿ ರೈತರಿಗೆ ಉತ್ತಮ ಮಳೆ, ಬೆಳೆ ನೀಡಿ, ಕಷ್ಟಗಳನ್ನು ದೂರ ಮಾಡಲಿ” ಎಂದು ನುಡಿದರು.
“ಗಣೇಶ ಚತುರ್ಥಿ ಸೌಹಾರ್ದತೆಯ ಹಬ್ಬ. ಇದು ಎಲ್ಲರ ಬದುಕಿನಲ್ಲಿ ಹೊಸ ಭರವಸೆ, ಆರೋಗ್ಯ ಮತ್ತು ಆಯುಷ್ಯ ತರಲಿ. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಪ್ರಗತಿ ನೆಲೆಸಲಿ” ಎಂದು ಷಣ್ಮುಖ ಶಿವಳ್ಳಿ ಆಶಿಸಿದರು. ಅವರ ಈ ಭಾಷಣಕ್ಕೆ ಸ್ಥಳೀಯ ಮುಖಂಡರು ಹಾಗೂ ಹಬ್ಬದ ಆಯೋಜಕರು ಮೆಚ್ಚುಗೆ ವ್ಯಕ್ತಪಡಿಸಿದರು.

