
ಹುಬ್ಬಳ್ಳಿ: ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಅವರು ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ತಮ್ಮ ಹುಬ್ಬಳ್ಳಿಯ ನಿವಾಸದಲ್ಲಿ ಕುಟುಂಬದ ಸದಸ್ಯರೊಂದಿಗೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಸಲ್ಲಿಸಿದರು. ಸಾಂಪ್ರದಾಯಿಕ ಶ್ರದ್ಧಾಭಕ್ತಿಯೊಂದಿಗೆ ನಡೆದ ಈ ಪೂಜಾ ಕಾರ್ಯಕ್ರಮದಲ್ಲಿ ಸಚಿವರು ಹಾಗೂ ಅವರ ಕುಟುಂಬದವರು ಸಡಗರದಿಂದ ಭಾಗವಹಿಸಿದರು.
ಸಚಿವರ ಭಕ್ತಿಪೂರ್ವಕ ಶುಭಾಶಯ
ಪೂಜೆಯ ನಂತರ, ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಎಕ್ಸ್ (ಹಿಂದೆ ಟ್ವಿಟರ್) ಖಾತೆಯಲ್ಲಿ, “ಶುಕ್ಲಾಂಬರದರಂ ವಿಷ್ಣುಂ, ಶಶಿವರ್ಣಂ ಚತುರ್ಭುಜಂ | ಪ್ರಸನ್ನ ವದನಂ ಧ್ಯಾಯೇತ್, ಸರ್ವ ವಿಘೋಪ ಶಾಂತಯೇ ||” ಎಂಬ ಶ್ಲೋಕದೊಂದಿಗೆ ಶುಭಾಶಯ ಕೋರಿದರು. ಜೊತೆಗೆ, ” ಗುರುವಾರದಂದು ಗಣೇಶ ಚತುರ್ಥಿಯ ನಿಮಿತ್ತ ಹುಬ್ಬಳ್ಳಿಯ ನಮ್ಮ ಮನೆಯಲ್ಲಿ ಸಹ ಕುಟುಂಬ ಪರಿವಾರದೊಂದಿಗೆ ಗಣಪನ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸಿದ ಪಾವನ ಕ್ಷಣಗಳು. ಗಣಪತಿ ಬಪ್ಪಾ ಮೋರಯಾ…ಮೋರಯಾ… ಬೋಲೋ ಗಜಾನನ ಮಹಾರಾಜ ಕಿ ಜೈ…” ಎಂದು ಬರೆದುಕೊಂಡು ಸಂಭ್ರಮ ಹಂಚಿಕೊಂಡರು.
ಸಚಿವರ ಈ ಭಕ್ತಿಪೂರ್ವಕ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದ್ದು, ಹಬ್ಬದ ವಾತಾವರಣಕ್ಕೆ ಮತ್ತಷ್ಟು ಕಳೆ ತಂದಿದೆ. ಕುಟುಂಬ ಮತ್ತು ಹಬ್ಬಗಳಿಗೆ ನೀಡುವ ಪ್ರಾಮುಖ್ಯತೆ, ಸಚಿವರ ಸರಳತೆ ಮತ್ತು ಸಂಪ್ರದಾಯಗಳಿಗೆ ಇರುವ ಗೌರವವನ್ನು ತೋರಿಸಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.

