
ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಅಕ್ಟೋಬರ್ 11ರ ಶನಿವಾರ ಸಂಜೆ 5 ಗಂಟೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್‌ನಲ್ಲಿ ಕನ್ನಡ ಕವಿಗಳು ವಿರಚಿತ ಸುಮಧುರ ಗೀತೆಗಳ ಸಂಗೀತ ಸಂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಸುನಿಲ್ ಪತ್ರಿ ಹಾಗೂ ಅವರ ಸಂಗಡಿಗರು ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಉದ್ಘಾಟನೆ ಮತ್ತು ಅಧ್ಯಕ್ಷತೆ
ವಿಧಾನ ಪರಿಷತ್ ಸದಸ್ಯ ಎಫ್. ಎಚ್. ಜಕ್ಕಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಪ್ರೊ. ಐ ಜಿ ಸನದಿ, ಉಪಮಹಾಪೌರರಾದ ಸಂತೋಷ ಚೌವ್ಹಾಣ್, ಪಾಲಿಕೆ ಸದಸ್ಯೆ ಮೀನಾಕ್ಷಿ ವಂಟಮುರಿ, ಭಾರತೀಯ ವಿದ್ಯಾಕೇಂದ್ರದ ಅಧ್ಯಕ್ಷ ಮಹೇಶ ಶೆಟ್ಟಿ, ಉದ್ದಿಮೆದಾರ ಡಾ. ರಮೇಶ್ ಮಹಾದೇವಪ್ಪನವರ, ಗಂಗಾವತಿ ಸಿಲ್ಕ ಪ್ಯಾಲೇಸ್‌ನ ಆನಂದ್ ಕಮತಗಿ ಇರುವರು. ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಗಣ್ಯರ ಉಪಸ್ಥಿತಿ ಮತ್ತು ಸನ್ಮಾನ
ಬಿ ಎ ಪಾಟೀಲ್, ಲೋಚನೇಶ ಹೂಗಾರ, ಆರ್ ಟಿ ತವನಪ್ಪನವರ, ಎಸ್ ಕೆ ಆದಪ್ಪನವರ, ಜಯಪ್ರಕಾಶ್ ಟೆಂಗಿನಕಾಯಿ, ಪ್ರೊ. ಮಹೇಶ ದ್ಯಾವಪ್ಪನರ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಧಾರವಾಡ ಜಿಲ್ಲೆಯ ಡಾ. ಶಾಂತಾ ಲಕ್ಷ್ಮೇಶ್ವರ, ಪದ್ಮಾಕ್ಷೀ ಒಡಯರ, ಪೂರ್ಣಿಮಾ ಮುತ್ನಾಳ, ಶಂಭಯ್ಯ ಹಿರೇಮಠ, ಭೀಮರಾಶಿ ಹೂಗಾರ, ಪ್ರಮಿಳಾ ಜಕ್ಕನ್ನವರ, ವೈಷ್ಣವಿ ಹಾನಗಲ್, ಮಂಜುನಾಥ ಯಲಿವಾಳ ಇವರಿಗೆ ಸನ್ಮಾನಿಸಿ ಗೌರವಿಸಲಾಗುವುದು.
ದತ್ತಿ ದಾನಿಗಳು ಮತ್ತು ಪ್ರಾಯೋಜಕರಾದ ಪ್ರೊ. ಜಿ ವ ವಳಸಂಗ, ವೀರಣ್ಣ ಹುಬ್ಳಿಕರ, ಪ್ರೊ. ಜಿ ವಿ ಚಿಕ್ಕಮಠ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಪ್ರೊ. ಕೆ ಎಸ್ ಕೌಜಲಗಿ, ಸುನಿಲ್ ಪತ್ರಿ, ವಿದ್ಯಾ ವಂಟಮುರಿ, ಚನ್ನಬಸಪ್ಪ ಧಾರವಾಡಶೆಟ್ಟರ, ಜಿ ವಿ ಚಿಕ್ಕಮಠ, ಸಿದ್ದಮ್ಮ ಅಡವೆಣ್ಣವರ, ಅನಸೂಯಾ ಪಾಟೀಲ್, ಸಂಧ್ಯಾ ದೀಕ್ಷಿತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

